ಉಳ್ಳಾಲ: ಎಸ್ಸೆಸ್ಸೆಫ್ ಕ್ಯಾಂಪಸ್‌ನಿಂದ ರಶೀದ್ ಹಾಜಿಯವರಿಗೆ ಸನ್ಮಾನ

Update: 2016-06-21 17:34 GMT

ಕೊಣಾಜೆ, ಜೂ.21: ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ ಉಳ್ಳಾಲ ಕ್ಯಾಂಪಸ್ ವತಿಯಿಂದ ಉಳ್ಳಾಲ ದರ್ಗಾದ ನೂತನ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿಯವರಿಗೆ ಸನ್ಮಾನ, ವಿಧ್ಯಾರ್ಥಿವೇತನ ಮಾಹಿತಿ, ಪ್ರತಿಭಾನ್ವಿತ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಸಾಧಕರಿಗೆ ಆಭಿನಂದನೆ, ಆಧ್ಯಾತ್ಮಿಕ ತರಗತಿ ಮತ್ತು ಇಫ್ತಾರ್ ಕೂಟ ಇತ್ತೀಚೆಗೆ ಉಳ್ಳಾಲ ನಗರಸಭಾ ಸಮುದಾಯ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾಧ್ಯಕ್ಷ ನವಾಝ್ ಅಮ್ಜದಿ ದುಆ ಮೂಲಕ ಉದ್ಘಾಟಿಸಿದರು. ಅಖಿಲ ಭಾರತ ಬ್ಯಾರಿ ಪರಿಷತ್‌ನ ಶಿಕ್ಷಣ ಕಾರ್ಯದರ್ಶಿ ಅಡ್ವಕೇಟ್ ಯೂಸುಫ್ ವಕ್ತಾರ್ ವಿದ್ಯಾರ್ಥಿವೇತನಗಳ ಮತ್ತು ಇನ್ನಿತರ ಸೌಲಭ್ಯಗಳ ಮಾಹಿತಿ ನೀಡಿದರು. ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಇದರ ಉಳ್ಳಾಲ ರೇಂಜ್ ಪ್ರಧಾನ ಕಾರ್ಯದರ್ಶಿ ಬಿ.ಕೆ. ಯೂನುಸ್ ಇಮ್ದಾದಿ ತೋಟ ಆಧ್ಯಾತ್ಮಿಕ ತರಗತಿ ನಡೆಸಿದರು.

ಈ ಸಂದರ್ಭ ಉಳ್ಳಾಲ ದರ್ಗಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಬ್ದುಲ್ ರಶೀದ್ ಹಾಜಿಯವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಶೀದ್ ಹಾಜಿ, ಸ್ವರ್ಗವು ಕಾತರದಿಂದ ಕಾಯುವ ಸಮೂಹವಾದ ಉತ್ತಮ ಗುಣನಡತೆ ಮತ್ತು ಸ್ವಭಾವವನ್ನು ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಪ್ರತಿಭಾನ್ವಿತರಾಗಿ ಬೆಳೆದು ಸಮಾಜಕ್ಕೆ ಒಳಿತನ್ನು ಮಾಡಬೇಕು ಮತ್ತು ಎಸ್ಸೆಸ್ಸೆಫ್ ಮುಂದಕ್ಕೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಹೇಳಿದರು.

ಎಸೆಸೆಲ್ಸಿ ಮತ್ತು ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸಾಹಿಲ್ ಕೊಟೇಪುರ, ಮುಝಫ್ಫರ್ ಅಕ್ಕೆರೆಕೆರೆ, ರೋಶನ್ ಮೇಲಂಗಡಿ ಮತ್ತು ಮುಹಮ್ಮದ್ ರಾಝಿ ಟಿಪ್ಪು ಸುಲ್ತಾನ್ ಕಾಲೇಜು ಇವರನ್ನು ಅಭಿನಂದಿಸಲಾಯಿತು.

ಅತಿಥಿಗಳನ್ನು ಹೂಗುಚ್ಚ ನೀಡಿ ಸಮೀರ್ ಮೆರೆಡಿಯನ್ ಮುಕ್ಕಚ್ಚೇರಿ, ನೌಫಲ್ ರೊಝಾರಿಯೋ ಕೊಟೇಪುರ, ಹಫೀಝ್ ಟಿಪ್ಪು ಕೋಡಿ, ತಶ್ರೀಫ್ ಯುನಿವರ್ಸಿಟಿ ಮೇಲಂಗಡಿ ಮತ್ತು ಫಾಶಿರ್ ಪಿ.ಎ. ಬಸ್ತಿಪಡ್ಪು ಬರಮಾಡಿಕೊಂಡರು. ಇಫ್ತಾರ್ ಸಂಗಮ ಸೌಕರ್ಯವನ್ನು ಎಸ್ಸೆಸ್ಸೆಫ್ ಮೇಲಂಗಡಿ ಶಾಖಾ ಕಾರ್ಯಕರ್ತರಾದ ಇಮ್ರಾನ್, ನವಾಝ್ ಮತ್ತು ಝಿಯಾದ್ ಮಾಡಿದರು. ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಮೋನು, ತೊಕ್ಕೊಟ್ಟು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಜಾಫರ್ ಅಳೇಕಲ ಮತ್ತು ಎಸ್‌ಬಿಎಸ್ ಉಳ್ಳಾಲ ಝೋನ್ ಅಧ್ಯಕ್ಷ ಇಸ್ಮಾಯೀಲ್ ಮುಹಾಝ್ ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಉಳ್ಳಾಲ ಕ್ಯಾಂಪಸ್ ಕಾರ್ಯದರ್ಶಿ ಹಫೀಝ್ ಕೋಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News