ಸುಳ್ಯ: ಪಿಂಚಣಿದಾರರ ಮತ್ತು ನಿವೃತ್ತ ನೌಕರರ ಸಂಘದ ಮಹಾಸಭೆ
ಸುಳ್ಯ, ಜೂ.21: ಸುಳ್ಯ ತಾಲೂಕು ಪಿಂಚಣಿದಾರರ ಮತ್ತು ನಿವೃತ್ತ ನೌಕರರ 36ನೆ ವಾರ್ಷಿಕ ಮಹಾಸಭೆ ಸಂಧ್ಯಾರಶ್ಮಿ ಸಭಾಂಗಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಡಾ.ಎಸ್.ರಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಾಬು ಗೌಡ ವರದಿ ಮಂಡಿಸಿದರು. ಖಜಾಂಚಿ ನೀರಬಿದಿರೆ ನಾರಾಯಣ ಲೆಕ್ಕಪತ್ರ ಮಂಡಿಸಿದರು.
ಕೇಂದ್ರ ಸರಕಾರದ ನಿವೃತ್ತ ನೌಕರರಿಗೆ ಸಿಗುವಂತೆ ರಾಜ್ಯ ಸರಕಾರದ ನಿವೃತ್ತ ನೌಕರರಿಗೂ ವೈದ್ಯಕೀಯ ಭತ್ತೆ ನೀಡುವಂತೆ ಠರಾವು ಮಂಡಿಸಲಾಯಿತು. ಸಂಘದ ವತಿಯಿಂದ ವಾರ್ಷಿಕ ಸಂಚಿಕೆ ಹೊರತರಲು ನಿರ್ಧರಿಸಲಾಯಿತು. ಸಂಘದ ಕಾರ್ಯಾಕಾರಿ ಸಮಿತಿಗೆ ನಾಲ್ವರು ಹೊಸ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಕೆಂಪಲಿಂಗಪ್ಪಅತಿಥಿಯಾಗಿ ಭಾಗವಹಿಸಿದ್ದರು. ಉದ್ಯೋಗದಲ್ಲಿದ್ದಾಗ ಕೆಲಸದ ಒತ್ತಡ ಇರುತ್ತದೆ. ಎಲ್ಲರೂ ಒಂದೆಡೆ ಸೇರುವುದು ಸಾಧ್ಯವಾಗುವುದಿಲ್ಲ. ನಿವೃತ್ತ ಬಳಿಕ ಎಲ್ಲಾ ಜಂಜಡ ಬಿಟ್ಟು ಒಂದೆಡೆ ಸೇರಲು ಸಾಧ್ಯವಾಗುತ್ತದೆ. ಕಳೆದ ಎರಡು ವರ್ಷದಿಂದ ನಿವೃತ್ತ ನೌಕರರ ಸಂಘ ಸದಾ ಚಟುವಟಿಕೆಯಿಂದ ಇದ್ದು, ಸ್ವಂತ ಕಟ್ಟಡವನ್ನೂ ನಿರ್ಮಿಸಲಾಗಿದೆ. ಸಂಘ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದವರು ಆಶಿಸಿದರು.
ಉಪಾಧ್ಯಕ್ಷೆ ಪ್ರೇಮಾ ಟೀಚರ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.