‘ಲೈಫ್‌ಲೈನ್’ನಲ್ಲಿ ನರರೋಗ ತಜ್ಞರ ಸೇವೆ
Update: 2016-06-22 00:22 IST
ವಿಟ್ಲ, ಜೂ.21: ಬಿ.ಸಿ.ರೋಡ್ ಕೈಕಂಬದ ‘ಲೈಫ್‌ಲೈನ್ ಹೆಲ್ತ್‌ಕೇರ್ ಪ್ಲಸ್’ನಲ್ಲಿ ಸಂದರ್ಶನಕ್ಕೆ ಲಭ್ಯರಿರುವ ವೈದ್ಯರ ಸಾಲಿಗೆ ಇದೀಗ ನರರೋಗ ತಜ್ಞರ ಸೇರ್ಪಡೆಗೊಂಡಿದೆ. ಮಂಗಳೂರಿನ ಖ್ಯಾತ ನರರೋಗ ತಜ್ಞ ಡಾ. ರೋಹಿತ್ ಪೈ ‘ಲೈಫ್‌ಲೈನ್ ಹೆಲ್ತ್‌ಕೇರ್’ನಲ್ಲಿ ಪ್ರತಿ ಶನಿವಾರ ಸಂಜೆ 4:30ರಿಂದ 6:30ರ ವರೆಗೆ ಸಂದರ್ಶನಕ್ಕೆ ಲಭ್ಯರಿರುತ್ತಾರೆ. ಇದಲ್ಲದೆ ಮಂಗಳೂರಿನ ಖ್ಯಾತ ನರ ಮಾನಸಿಕ ರೋಗ ತಜ್ಞರಾದ ಡಾ. ಕ್ಯಾರೋಲಿನ್ ಪಿ. ಡಿಸೋಜ ಪ್ರತಿ ರವಿವಾರ ಬೆಳಗ್ಗೆ 9ರಿಂದ 12ರವರೆಗೆ ಇಲ್ಲಿ ಸಂದರ್ಶನಕ್ಕೆ ಲಭ್ಯರಿರುತ್ತಾರೆ. ಸಂಸ್ಥೆಯ ಆವರಣದಲ್ಲಿ ಸಿಟಿ ಸ್ಕ್ಯಾನ್ ಸೌಲಭ್ಯವೂ ಇದೆ. ಮಾಹಿತಿಗಾಗಿ ದೂ.ಸಂ.08255-230444 ಅಥವಾ ಮೊ.ಸಂ.9686246244ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.