ಬಿಜೆಪಿಯಿಂದ ಚುನಾವಣೆಗಾಗಿ ದ್ವೇಷ ರಾಜಕೀಯ : ಸ್ವಾಮಿ ಚಕ್ರಪಾಣಿ

Update: 2016-06-22 06:56 GMT

ಮೀರಠ್ , ಜೂ. 22 : ಸ್ವಾಮಿ ಚಕ್ರಪಾಣಿ ಅವರ ನೇತೃತ್ವದ ಸ್ವಾಮೀಜಿಗಳ ನಿಯೋಗ ಇತ್ತೀಚಿಗೆ ಕೈರಾನಕ್ಕೆ ಭೇಟಿ ನೀಡಿ ಬಿಜೆಪಿ ಸಂಸದ ಹುಕುಂ ಸಿಂಗ್ ಮಾಡಿದ ' ಹಿಂದೂ ವಲಸೆ'  ಆರೋಪದ ಸತ್ಯಾಸತ್ಯತೆಯನ್ನು ಪರಿಶೀಲಿಸಿತು. ಬಳಿಕ ಮಾತನಾಡಿದ ಸ್ವಾಮೀಜಿ ಅವರು ಬಿಜೆಪಿ ಕೋಮು ರಾಜಕೀಯದ ಮೂಲಕ ಜನರ ನಡುವೆ ದ್ವೇಷ ಬಿತ್ತುತ್ತಿದೆ ಎಂದು ಆರೋಪಿಸಿದರು. 

" ಕೈರಾನದ ಸಮಸ್ಯೆಗೆ ಕೋಮು ಬಣ್ಣ ನೀಡುವುದು ತಪ್ಪು. ಬಿಜೆಪಿ ಹಾಗೂ ಸಂಸದ ಹುಕುಂ ಸಿಂಗ್ ಕೋಮು ರಾಜಕೀಯ ಮಾಡುತ್ತಿದ್ದಾರೆ. ಹಿಂದೂಗಳಲ್ಲಿ ಭಯ ಸೃಷ್ಟಿಸಿ ಚುನಾವಣೆ ಗೆಲ್ಲುವುದು ಮಾತ್ರ ಅವರ ಗುರಿ ಎಂಬಂತೆ ಕಾಣುತ್ತಿದೆ. ಈ ದ್ವೇಷ ರಾಜಕಾರಣವನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಕೈರಾನದಲ್ಲಿ ಮುಸ್ಲಿಮರು ಹಿಂದೂಗಳ ಮೇಲೆ ಪ್ರಾಬಲ್ಯ ಸಾಧಿಸಿದ್ದಾರೆ ಎಂಬಂತಹ ಸಮಸ್ಯೆ ಇಲ್ಲ. ಇಲ್ಲಿರುವುದು ಅಪರಾಧದ ಸಮಸ್ಯೆ. ಅಪರಾಧಿಗಳಿಗೆ ಧರ್ಮವಿಲ್ಲ. ಸ್ಥಳೀಯ ಗೂಂಡಾಗಳು ಎಲ್ಲ ಧರ್ಮಗಳ ಜನರನ್ನು ಹೆದರಿಸಿಟ್ಟಿದ್ದಾರೆ . ಈ ಬಗ್ಗೆ ಇಲ್ಲಿನ ಮುಸ್ಲಿಮರು , ಹಿಂದೂಗಳು ಎಲ್ಲರೂ ಚಿಂತಿತರಾಗಿದ್ದಾರೆ . ಈಗ ಸ್ಥಳೀಯ ಗೂಂಡಾ ಮುಕೀಮ್ ಕಾಲಾನನ್ನು ಬಂಧಿಸಲಾಗಿದೆ. ಆದರೆ ಇದಕ್ಕೆ ಕೋಮು ಬಣ್ಣ ನೀಡಿರುವುದು ತಪ್ಪು  ನಾವು ಮೂರು ದಿನಗಳೊಳಗೆ ಈ ಬಗ್ಗೆ ಸವಿವರ ವರದಿ ಸಲ್ಲಿಸುತ್ತೇವೆ  " ಎಂದು ಸ್ವಾಮಿ ಚಕ್ರಪಾಣಿ ಹೇಳಿದರು. 

' ರಾಜಕೀಯವಾಗಿ ತಟಸ್ಥ' ರಾದ ಐದು ಪ್ರಮುಖ ಸ್ವಾಮೀಜಿಗಳು ಕೈರಾನಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ರಾಜ್ಯದ ಸಚಿವ ಶಿವಪಾಲ್ ಯಾದವ್ ಮನವಿ ಮಾಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News