×
Ad

ಕಲಬುರಗಿ ಕಿರುಕುಳ ಪ್ರಕರಣ: ಇನ್ನೂ ಗಂಭೀರ ಸ್ಥಿತಿಯಲ್ಲಿ ಕಿರುಕುಳಕ್ಕೊಳಗಾದ ಕೇರಳದ ವಿದ್ಯಾರ್ಥಿನಿ

Update: 2016-06-22 12:41 IST

ಕೋಝಿಕ್ಕೋಡ್,ಜೂನ್ 22: ಹಿರಿಯ ವಿದ್ಯಾರ್ಥಿನಿಯರಿಂದ ಕ್ರೂರವಾಗಿ ರ್ಯಾಗಿಂಗ್‌ಗೆ ತುತ್ತಾಗಿ ಇದೀಗ ಕೋಝಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಲಿತ ವಿದ್ಯಾರ್ಥಿನಿಯ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆಯಾಗಿಲ್ಲ. ಕಲಬುರಗಿ ರಿಂಗ್ ರಸ್ತೆಯ ಅಲ್‌ಕಮರ್ ಕಾಲೇಜ್ ಆಫ್ ನರ್ಸಿಂಗ್‌ನ ಒಂದನೇ ವರ್ಷದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿ ಎಡಪ್ಪಾಲ್ ಪುಳ್ಳುವಂಪಾಡಿ ಕಳರಿಕ್ಕಪ್ಪರಂಬ್ ಅಶ್ವತಿ(18) ಗಂಭೀರ ಸ್ಥಿತಿಯಲ್ಲಿ ಮೆಡಿಕಲ್ ಕಾಲೇಜ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಿರಿಯ ವಿದ್ಯಾರ್ಥಿಗಳು ಟಾಯ್ಲೆಟ್ ತೊಳೆಯುವ ಲೋಶನ್‌ನ್ನು ಕುಡಿಸಿದ್ದು ಅಶ್ವತಿಯ ಅನ್ನನಾಳ ಬೆಂದು ಹೋಗಿದ್ದು ಉಗುಳನ್ನು ಕೂಡಾ ನುಂಗಲು ಸಾಧ್ಯವಾಗದ ಸ್ಥಿತಿಯಲ್ಲಿ ನರಕಯಾತನೆ ಅನುಭವಿಸುತ್ತಿದ್ದಾಳೆ.

ಕೊರಳಲ್ಲಿ ತೂತು ಕೊರೆದು ದ್ರವರೂಪದ ಆಹಾರವನ್ನು ನೀಡಲಾಗುತ್ತಿದೆ. ಲೋಶನ್‌ನಲ್ಲಿದ್ದ ಆಸಿಡ್ ಗಂಟಲಿನಲ್ಲಿ ತೀವ್ರ ಗಾಯಗಳನ್ನುಂಟು ಮಾಡಿದ್ದು ಅನ್ನನಾಳದ ಎರಡು ಭಾಗಗಳು ಪರಸ್ಪರ ಅಂಟಿಕೊಂಡಿವೆ. ಇದನ್ನು ಬೇರ್ಪಡಿಸಲು ಸರ್ಜರಿ ನಡೆಸಬೇಕಾಗುವುದು ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಆರೋಗ್ಯ ಸ್ಥಿತಿ ಉತ್ತಮವಾದರೆ ಮಾತ್ರ ಸರ್ಜರಿ ನಡೆಸಲು ಸಾಧ್ಯವಿದೆ. ಬಹಳ ದಿನಗಳ ಬಳಿಕ ಅಶ್ವತಿ ಸ್ವಲ್ಪ ಮಾತಾಡಿದ್ದಾಳೆ. ಪ್ರಾಣಾಪಾಯದಿಂದ ಪಾರಾದರೂ ಉಸಿರಾಟ ಕಷ್ಟ ವಾಗುತ್ತಿದೆ. ಜೊತೆಗೆ ಎದೆನೋವು ಕಂಡು ಬಂದಿದೆ. ಅಶ್ವತಿಯ ಹೇಳಿಕೆ ಪ್ರಕಾರ ಮೆಡಿಕಲ್ ಕಾಲೇಜು ಪೊಲೀಸ್ ಕೇಸು ದಾಖಲಿಸಿದೆ. ಕಲಬುರಗಿಯ ಪೊಲೀಸ್ ಠಾಣೆಗೆ ಪ್ರಕರಣವನ್ನು ಹಸ್ತಾಂತರಿಸಲಾಗುವುದೆಂದು ಮೆಡಿಕಲ್ ಕಾಲೇಜ್ ಸಿಐ ಜಲೀಲ್ ತೋಟ್ಟತ್ತಿಲ್ ತಿಳಿಸಿದ್ದಾರೆ. ಕೋಝಿಕ್ಕೋಡ್ ಸಿಟಿ ಡೆಪ್ಯುಟಿ ಪೊಲೀಸ್ ಕಮಿಶನರ್ ಡಿ.ಸಾಲಿ. ಮೆಡಿಕಲ್ ಕಾಲೇಜ್ ಸಿಐ ಜಲೀಲ್ ತೋಟ್ಟತ್ತಿಲ್, ಎಸ್ಸೈ ಹಬೀಬುಲ್ಲಾ ಅಶ್ವತಿಯಿಂದ ಹೇಳಿಕೆಯನ್ನು ಪಡೆದು ಕೊಂಡಿದ್ದಾರೆ. ರ್ಯಾಗಿಂಗ್ ನಡೆಸಿದ ಹಿರಿಯ ವಿದ್ಯಾರ್ಥಿನಿಯರ ವಿರುದ್ಧ ಕೊಲೆಯತ್ನ, ದಲಿತ ದೌರ್ಜನ್ಯ, ರ್ಯಾಗಿಂಗ್ ಎಂಬ ಸೆಕ್ಷನ್‌ಗಳನ್ವಯ ಕೇಸು ದಾಖಲಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News