×
Ad

ಜಿಶಾ ಕೊಲೆ ಪ್ರಕರಣ: ಸ್ಪೆಶಲ್ ಪಬ್ಲಿಕ್ ಪ್ರಾಸಿಕ್ಯೂಟರ್‌ ನೇಮಕಕ್ಕೆ ಚಿಂತನೆ

Update: 2016-06-22 12:54 IST

ಕೊಚ್ಚಿ, ಜೂನ್ 22: ಜಿಶಾ ಕೊಲೆ ಪ್ರಕರಣದಲ್ಲಿ ಪ್ರೋಸಿಕ್ಯೂಶನ್ ಕ್ರಮಗಳನ್ನು ಬಲಿಷ್ಠಗೊಳಿಸಲಿಕ್ಕಾಗಿ ಸ್ಪೆಶಲ್ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕಗೊಳಿಸಲಿದ್ದು ವಿಚಾರಣೆಯ ಪ್ರಾಥಮಿಕ ಹಂತದಲ್ಲಿ ಯಾವುದೇ ಪ್ರಮಾದವಾಗಬಾರದೆಂಬ ಉದ್ದೇಶದಲ್ಲಿ ಈ ಕ್ರಮಕ್ಕೆ ಸರಕಾರ ಮುಂದಾಗಿದೆ. ಮೊದಲ ಹೆಜ್ಜೆಯಾಗಿ ಕ್ರಿಮಿನಲ್ ಕೇಸುಗಳಲ್ಲಿ ನುರಿತ ವಕೀಲರೊಂದಿಗೆ ತನಿಖಾ ತಂಡ ಚರ್ಚೆ ನಡೆಸಿದೆ. ಈ ಮೊದಲು ಹೊರರಾಜ್ಯ ಕಾರ್ಮಿಕರ ಸಹಿತ ಕೊಲೆಕೃತ್ಯ ಪ್ರಕರಣದಲ್ಲಿ ಸ್ಪೆಷಲ್ ಪ್ರಾಸಿಕ್ಯೂಟರಾಗಿ ಕೆಲಸ ಮಾಡಿ ಅನುಭವ ಇರುವ ವಕೀಲರೊಂದಿಗೆ ಚರ್ಚೆ ನಡೆಸಲಾಯಿತು.

ಅಮೀರುಲ್ ಇಸ್ಲಾಮ್‌ನ ಮೊದಲ ಪತ್ನಿಯ ಪುತ್ರ ಕಸ್ಟಡಿಯಲ್ಲಿ

ಜಿಶಾ ಕೊಲೆ ಪ್ರಕರಣದ ಆರೋಪಿ ಅಮೀರುಲ್ ಇಸ್ಲಾಮ್‌ನ ಮೊದಲ ಪತ್ನಿಯ ಮಗನನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಹತ್ತೊಂಬತ್ತು ವರ್ಷ ವಯಸ್ಸಿನ ಈತನನ್ನು ಪೆರುಂಬಾವೂರಿನಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯೊಂದಿಗೆ ಈತ ನಿಕಟ ಸಂಬಂಧ ಹೊಂದಿದ್ದನೆನ್ನಲಾಗಿದೆ. ಘಟನೆಯ ದಿವಸ ಅಮೀರ್ ಧರಿಸಿದ ವಸ್ತ್ರಗಳು ಮತ್ತು ಆಯುಧಗಳನ್ನು ಬೇರೆಡೆಗೆ ಸಾಗಿಸಿದ್ದುಈತನೆಂದು ಪೊಲೀಸರು ಶಂಕಿಸಿದ್ದಾರೆ. 43 ವರ್ಷ ಪ್ರಾಯದ ಮೊದಲ ಪತ್ನಿಯೊಂದಿಗೆ ಒಳ್ಳೆಯ ಸಂಬಂಧವೇನು ಇಲ್ಲದಿದ್ದರೂ ಆಕೆಗೆ ಮೊದಲ ಪತಿಯಲ್ಲಿ ಹುಟ್ಟಿದ ಪುತ್ರನೊಂದಿಗೆ ಅಮೀರ್ ಉತ್ತಮ ಸಂಬಂಧವನ್ನು ಇರಿಸಿಕೊಂಡಿದ್ದ. ಈತ ಅಮೀರ್‌ನನ್ನು ನೋಡಿಹೋಗಲು ಆಗಾಗ ಕೆಲಸದಲ್ಲಿಗೆ ಬಂದು ಹೋಗುತ್ತಿದ್ದ ಎಂದು ಪೊಲೀಸರಿಗೆ ಮಾಹಿತಿ ಲಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News