ಕೋಲ್ಕತ್ತಾದಲ್ಲಿ ಮೊಸಳೆ ರೂಪದ ಆಕ್ರಮಣಕಾರಿ ಮೀನು ಪತ್ತೆ !

Update: 2016-06-22 07:41 GMT

ಕೋಲ್ಕತಾ, ಜೂ. 22 : ಇಲ್ಲಿನ ಬೇಲಿಯಾಘಾಟ್ ಪ್ರದೇಶದ ಸುಭಾಷ್ ಸರೋವರ್ ನಲ್ಲಿ ವಿಚಿತ್ರ ಹಾಗೂ ಅಷ್ಟೇ ಆಕ್ರಮಣಕಾರಿ ಮೊಸಳೆ ರೂಪದ ಮೀನೊಂದು ಸಿಕ್ಕಿರುವ ತಜ್ಞರು ಈ ಬಗ್ಗೆ ಭಾರೀ ಆತಂಕ ವ್ಯಕ್ತಪಡಿಸಿದ್ದಾರೆ. 8 ಅಡಿಗಳಷ್ಟು ಉದ್ದ ಬೆಳೆಯುವ ಈ ಮೀನು ಸ್ಥಳೀಯ ಪರಿಸರ ವ್ಯವಸ್ಥೆ ಹಾಗೂ ಜೀವ ವೈವಿಧ್ಯವನ್ನು ನಾಶ ಮಾಡಲಿದೆ ಎಂದು ಅವರು ಹೇಳಿದ್ದಾರೆ. 

ಸ್ಥಳೀಯ ಗಾಳ ಹಾಕಿ ಮೀನು ಹಿಡಿಯುವ ಶಿಬು ಮೊಂಡಲ್ ಗೆ  ಈ 3.5 ಅಡಿ ಉದ್ದದ ಮೊಸಳೆ ರೂಪದ ಮೀನು ಸಿಕ್ಕಿದೆ. ಉದ್ದ ಚೂಪಾದ ಹಲ್ಲುಗಳು ಹಾಗೂ ಆಕ್ರಮಣಕಾರಿ ಪ್ರವೃತ್ತಿಯ ಮೀನು ಇದು. ಕೆಲವೊಮ್ಮೆ ಇದು ಮನುಷ್ಯರ ಮೇಲೂ ಆಕ್ರಮಣ ಮಾಡುತ್ತವೆ. ಈ ಮೀನಿನ ಮೊಟ್ಟೆ ಕೂಡ ವಿಷಕಾರಿಯಾಗಿದೆ. ಕ್ಷಣಮಾತ್ರದಲ್ಲೇ ಅತ್ಯಂತ ಆಕ್ರಮಣಕಾರಿಯಾಗುವುದು ಈ ಮೀನಿನ ವಿಶೇಷ  ಎಂದು ತಿಳಿದು ಬಂದಿದೆ. 

ಈ ಮೀನು ಕೆರೆಯಲ್ಲಿರುವ ಉಳಿದೆಲ್ಲ ಮೀನುಗಳನ್ನು ಕೊಂದು ಹಾಕಲಿದೆ. ಈ ಮೀನಿನ ವಂಶಕ್ಕೆ ಸೇರಿದ ಮೀನುಗಳು ವಿಶ್ವದ ವಿವಿಧೆಡೆ ಇದ್ದವು. ಆದರೆ ಈಗ ಕೇವಲ ಉತ್ತರ ಹಾಗೂ ಮಧ್ಯ ಅಮೆರಿಕದಲ್ಲಿ ಮಾತ್ರ ಇರುತ್ತವೆ. ಈ ಪ್ರಭೇದಗಳಲ್ಲೇ ಇದು ಅತಿ ದೊಡ್ಡ ಮೀನು ಎಂದು ಹೇಳಲಾಗಿದೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News