ಕೈಲಾಶ್ ಖೇರ್ ಹಾಡಿಗೆ ಹೆಜ್ಜೆ ಹಾಕಿ ನಗೆಪಾಟಲಿಗೀಡಾದ ರಾಮದೇವ್

Update: 2016-06-22 07:58 GMT

ಹೊಸದಿಲ್ಲಿ, ಜೂ. 22 : ಜೂನ್ ೨೧ ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪೂರ್ವಭಾವೀ ತರಬೇತಿ ಕಾರ್ಯಕ್ರಮದಲ್ಲಿ ಗಾಯಕ ಕೈಲಾಶ್ ಖೇರ್ ಅವರ ಹಾಡಿಗೆ  ಹೆಜ್ಜೆ ಹಾಕಲು ಹೋಗಿ ಬಾಬಾ ರಾಮದೇವ್ ಅವರು ನಗೆಪಾಟಲಿಗೀಡಾದ ಘಟನೆ ನಡೆದಿದೆ. ದಿಲ್ಲಿಯ ರಾಜಪಥ್ ನಲ್ಲಿ ನಡೆದ ಈ ಕಾರ್ಯಕ್ರಮದ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲರೂ ರಾಮದೇವ್ ರ ಈ ವಿಚಿತ್ರ ಯೋಗ ವನ್ನು ನೋಡಿ ನಗುತ್ತಿದ್ದಾರೆ. 
ಮರುದಿನದ ಕಾರ್ಯಕ್ರಮಕ್ಕೆ ತರಬೇತಿ, ಮಾರ್ಗದರ್ಶನ ನೀಡಬೇಕಿದ್ದ ರಾಮದೇವ್ ಇದ್ದಕ್ಕಿದ್ದಂತೆ ಗಾಯಕ ಖೇರ್ ಅವರ ಹಾಡಿಗೆ ಯೋಗ ಭಂಗಿಯಲ್ಲೇ ಹೆಜ್ಜೆ ಹಾಕಲು ಪ್ರಾರಂಭಿಸಿದರು. ಈಗ ಅದರ ವೀಡಿಯೊ  ಎಲ್ಲರ ತಮಾಷೆಯ ವಸ್ತುವಾಗಿದೆ.  

Full View


video Courtesy : abpnews
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News