ನದಿಯಾಗಿ ಮಾರ್ಪಟ್ಟ ತುಂಬೆಯ ರಾಷ್ಟ್ರೀಯ ಹೆದ್ದಾರಿ
Update: 2016-06-22 18:14 IST
ಸತತವಾಗಿ ಸುರಿದ ಮಳೆಯ ಪರಿಣಾಮವಾಗಿ ತುಂಬೆ ಬಿ.ಎ. ಶಾಲಾ ಬಳಿ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ನೀರು ತುಂಬಿದ್ದು, ನದಿಯಾಗಿ ಮಾರ್ಪಟ್ಟಿದೆ. ರಸ್ತೆಯಲ್ಲಿ ನಿಂತಿರುವ ನೀರಿನಿಂದಾಗಿ ಎದುರುಗಡೆಯಿಂದ ಬರುವ ವಾಹನಗಳ ಸವಾರರು ಕೆಸರು ನೀರಿನಿಂದ ಅಭಿಷೇಕ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಡಿವೈಡರ್ ಮಟ್ಟದಲ್ಲಿ ಶೇಖರಗೊಂಡಿರುವ ನೀರಿನಿಂದಾಗಿ ಹಲವು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳೂ ನಡೆದಿವೆ.