ತುರ್ತು ಪರಿಸ್ಥಿತಿಯಲ್ಲಿ ವಿಕೃತ ಸಂದೇಶ ರವಾನೆ: ಬ್ಲಡ್ ಡೋನರ್ಸ್‌ ಮಂಗಳೂರು ತಂಡದಿಂದ ದೂರು

Update: 2016-06-22 15:18 GMT

ಮಂಗಳೂರು, ಜೂ.22: ಕುಂದಾಪುರದಲ್ಲಿ ನಡೆದ ಭೀಕರ ಅಪಘಾತದಲ್ಲಿ 8 ಎಳೆಯ ಜೀವಗಳು ಬಲಿಯಾದವು. ಈ ಭೀಕರ ದುರಂತಕ್ಕೆ ಇಡೀ ರಾಜ್ಯವೇ ಕಂಬನಿ ಮಿಡಿಯಿತು. ಗಾಯಾಳುಗಳಾಗಿ ಮಣಿಪಾಲ್ ಆಸ್ಪತ್ರೆಗೆ ಸೇರಿದ್ದ ಕಂದಮ್ಮಗಳಿಗೆ ಎಲ್ಲ ಸಂಘಟನೆಗಳು ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದವು. ಆದರೆ, ಸಾಮಾಜಿಕ ಜಾಲತಾಣವಾದ ವಾಟ್ಸಾಪ್ ಮತ್ತು ಫೇಸ್ಬುಕ್‌ನಲ್ಲಿ ಕುಂದಾಪುರ ಅಪಘಾತದಲ್ಲಿ ಗಾಯಾಳುಗಳಿಗೆ ರಕ್ತದ ಅವಶ್ಯಕತೆ ಇದೆ ಎಂಬ ನಾಲ್ಕು ಮೊಬೈಲ್ ನಂಬರ್ ಗಳನ್ನು ಹೊಂದಿದ್ದ ಸಂದೇಶವೊಂದು ಬಹಳ ವೇಗವಾಗಿ ಹರಿಯತೊಡಗಿದ್ದು, ಜನರಲ್ಲಿ ಗೊಂದಲಕ್ಕೆ ಕಾರಣವಾಗಿತ್ತು.

ಇಂತಹ ಸಂದೇಶಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಬ್ಲಡ್ ಡೋನರ್ಸ್‌ ಮಂಗಳೂರು ಸಂಸ್ಥೆಯ ವತಿಯಿಂದ ಸಿಟಿ ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ನೀಡಲಾಯಿತು. ತಂಡದ ಸಲಹೆಗಾರ ಸುಹೈಲ್ ಕಂದಕ್ ಸಿಟಿ ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ನೀಡಿದರು. ಈ ಸಂದರ್ಭ ಬ್ಲಡ್ ಡೋನರ್ಸ್‌ ಮಂಗಳೂರು ತಂಡದ ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News