ಸಚಿವ ಪ್ರಮೋದ್‌ಗೆ ಇಂದು ಅಭಿನಂದನೆ
Update: 2016-06-22 23:46 IST
ಉಡುಪಿ, ಜೂ.22: ನೂತನ ಸಚಿವರಾಗಿ ಪ್ರಮಾಣವಚನಗೈದ ಬಳಿಕ ಉಡುಪಿ ಜಿಲ್ಲೆಗೆ ಆಗಮಿಸಿರುವ ಸಚಿವ ಪ್ರಮೋದ್ ಮಧ್ವರಾಜ್‌ರಿಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಜೂ.23ರಂದು ಸಂಜೆ 5:30ಕ್ಕೆ ಅಜ್ಜರಕಾಡು ಪುರಭವನದಲ್ಲಿ ಸಾರ್ವಜನಿಕರಿಂದ ಅಭಿ ನಂದನಾ ಸಭೆಯನ್ನು ಆಯೋಜಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಸಂಜೆ 4ಕ್ಕೆ ಉದ್ಯಾವರ ಬಲಾಯಿಪಾದೆಯಲ್ಲಿ ಸಚಿವರನ್ನು ಸ್ವಾಗತಿಸಿ ತದನಂತರ ವಾಹನ ಜಾಥಾದ ಮೂಲಕ ಬ್ರಹ್ಮಗಿರಿ ಕಾಂಗ್ರೆಸ್ ಭವನಕ್ಕೆ ಕರೆತರಲಾಗುವುದು.