×
Ad

ಚುಟುಕು ಸುದ್ದಿಗಳು

Update: 2016-06-22 23:56 IST

ಜಿಪಂ -ಪಪ ಸದಸ್ಯರ ಜಟಾಪಟಿ:ದೂರು ಪ್ರತಿದೂರು
ಕೋಟ, ಜೂ.22: ಚಿತ್ರಪಾಡಿ ಗ್ರಾಮದ ರಾಮಚಂದ್ರ ಗಾಣಿಗ ಎಂಬವರ ಮನೆಯ ಸಮೀಪದ ಮಳೆಗಾಲದ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಜೂ.21ರಂದು ಸಂಜೆ ವೇಳೆ ಸಾಲಿಗ್ರಾಮ ಪಪಂ ಸದಸ್ಯ ಮಹಾಬಲ ಮಡಿವಾಳ ಹಾಗೂ ಉಡುಪಿ ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಪರಸ್ಪರ ಬೆದರಿಕೆ ಹಾಕಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.
 ಸಾಲಿಗ್ರಾಮ ಪಪಂ ನಾಮ ನಿರ್ದೇಶಿತ ಸದಸ್ಯ ಕೋಟದ ಮಹಾಬಲ ಮಡಿವಾಳ (38) ಮಳೆಗಾಲದ ನೀರಿನ ಸಮಸ್ಯೆಯ ಇತ್ಯರ್ಥಕ್ಕೆ ಹೋದಾಗ ಅಲ್ಲಿಗೆ ಬಂದ ಉಡುಪಿ ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆಯೊಡ್ಡಿ ಕೈಯಿಂದ ಹಲ್ಲೆ ಮಾಡಿ ರುವುದಾಗಿ ದೂರಲಾಗಿದೆ.
ಪ್ರತಿದೂರು: ನೀರಿನ ಸಮಸ್ಯೆ ಇತ್ಯರ್ಥ ಕ್ಕಾಗಿ ಹೋದ ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಹಾಗೂ ಸಾಲಿಗ್ರಾಮ ಪಪಂ ಸದಸ್ಯ ಭೋಜ ಪೂಜಾರಿಗೆ ಮಹಾಬಲ ಮಡಿವಾಳ ಮದ್ಯ ಸೇವನೆ ಮಾಡಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಲು ಯತ್ನಿಸಿ ಜೀವ ಬೆದರಿಕೆಯೊಡ್ಡಿರುವುದಾಗಿ ಪ್ರತಿದೂರು ದಾಖಲಾಗಿದೆ.


ಕಂಡ್ಲೂರು ಚರ್ಚಿನಲ್ಲಿ ಕಳವಿಗೆ ಯತ್ನ
ಕುಂದಾಪುರ, ಜೂ.22: ಕಂಡ್ಲೂರಿನ ಸಂತ ಅಂತೋನಿ ಚರ್ಚ್‌ನಲ್ಲಿ ಕಳವಿಗೆ ಯತ್ನಿಸಿರುವ ಘಟನೆ ಜೂ.21ರಂದು ರಾತ್ರಿ ವೇಳೆ ನಡೆದಿದೆ.
 ಚರ್ಚ್‌ನ ಬೀಗ ಮುರಿದು ಒಳನುಗ್ಗಿದ ಕಳ್ಳರು ಕೋಣೆ ಯಲ್ಲಿದ್ದ ಎರಡು ಕಬ್ಬಿಣದ ಕಪಾಟುಗಳ ವಸ್ತುಗಳನ್ನು ಚೆಲ್ಲಾ ಪಿಲ್ಲಿ ಮಾಡಿ, ಕಳವಿಗೆ ಯತ್ನಿಸಿ ರುವುದು ಕಂಡುಬಂದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.


ಅನುಮಾನಾಸ್ಪದ ವ್ಯಕ್ತಿಗಳ ಸೆರೆ
ಶಿರ್ವ, ಜೂ.22: ಶಿರ್ವ ಪೇಟೆಯಲ್ಲಿ ಜೂ.21ರಂದು ಬೆಳಗಿನ ಜಾವ 4:30ರ ಸುಮಾರಿಗೆ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಶಿರ್ವ ಶಾರದಾ ಶಾಲೆ ಬಳಿಯ ನಿವಾಸಿ ಸುದರ್ಶನ್(22) ಹಾಗೂ ಸುಧಾಕರ(18) ಎಂಬವರನ್ನು ಶಿರ್ವ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಖಾಸಗಿ ಶಾಲಾ ವಾಹನಗಳ ತಪಾಸಣೆಗೆ ಆಗ್ರಹ
ಕುಂದಾಪುರ, ಜೂ.22: ಮೀಸಲು ಸೀಟುಗಳಿಗಿಂತ ಹೆಚ್ಚು ಮಕ್ಕಳನ್ನು ತುಂಬಿಸಿಕೊಂಡು ಹೋಗುವ ಶಾಲಾ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕುಂದಾಪುರ ತಾಲೂಕು ಎಸ್‌ಎಫ್‌ಐ ಹಾಗೂ ಡಿವೈಎಫ್‌ಐ ಸಂಘಟನೆಗಳು ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದೆ.

ಕುಂದಾಪುರ ತಾಲೂಕಿನ ಹಲವಾರು ಶಾಲೆಗಳು, ಖಾಸಗಿ ವಾಹನಗಳ ಮೂಲಕ ಸೀಟುಗಳಿಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ಹೋಗಿರುವುದೇ ಮೊವಾಡಿ ದುರಂತಕ್ಕೆ ಕಾರಣ. ಆದುದರಿಂದ ಆರ್‌ಟಿಒ ಇಲಾಖೆ ಹಾಗೂ ಸಂಚಾರ ಪೊಲೀಸ್ ಇಲಾಖೆಯು ಇಂತಹ ವಾಹನಗಳನ್ನು ತಪಾಸಣೆ ನಡೆಸಿ ಮುಂದೆ ನಡೆಯುವ ದುರಂತಗಳನ್ನು ತಪ್ಪಿಸಬೇಕು ಎಂದು ಅವು ಒತ್ತಾಯಿಸಿವೆ.

ಶ್ರೀಗಂಧದ ಮರ ಕಳವು:ಇಬ್ಬರ ಬಂಧನ
    ಕಾಸರಗೋಡು, ಜೂ.22: ದೈವಸ್ಥಾನ ಪರಿಸರದಿಂದ ಶ್ರೀಗಂಧದ ಮರಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಬೇಡಡ್ಕ ಪೊಲೀಸರು ಬಂಧಿಸಿದ್ದಾರೆ.
   ಬಂಧಿತರನ್ನು ಮರುತ್ತಡ್ಕ ಚೇಡಿಕುಂಡುವಿನ ಶಾಫಿ ( 25) ಮತ್ತು ಮುಹಮ್ಮದ್ (40) ಎಂದು ಗುರುತಿಸಲಾಗಿದೆ. ಪ್ರಕರಣದ ಪ್ರಥಮ ಆರೋಪಿ ಸಿಯಾದ್‌ಮತ್ತು ಮತ್ತೊಬ್ಬ ಆರೋಪಿ ರಹೀಫ್ ತಲೆಮರೆಸಿಕೊಂಡಿದ್ದಾರೆ.
    ಬೇಡಡ್ಕ ವಯನಾಟ್ ಕುಲವನ್, ಗುಳಿಗನ್ ದೈವಸ್ಥಾನಕ್ಕೆ ಸೇರಿದ ಸುಮಾರು 80 ಸಾವಿರ ರೂ. ಮೌಲ್ಯದ ಶ್ರೀಗಂಧದ ಮರಗಳನ್ನು ಜೂನ್ 11ರಂದು ಕಳ ವುಗೈಯಲಾಗಿತ್ತು. ಕೆಲದಿನಗಳ ಹಿಂದೆ ಶ್ರೀಗಂಧದ ಮರಗಳನು ್ನಮಾರಾಟ ಮಾಡುತ್ತಿದ್ದೀರಾ ಎಂದು ಕೇಳಿ ಶಾಫಿ ಮತ್ತು ಮುಹಮ್ಮದ್‌ರವರು ದೈವಸ್ಥಾನದ ಪದಾಧಿಕಾರಿಗಳನ್ನು ಭೇಟಿ ಯಾಗಿದ್ದರು. ಉತ್ತಮ ಬೆಲೆಯ ಭರವಸೆ ನೀಡಲಾಗಿತ್ತು.
   ಇದಾಗಿ ಕೆಲ ದಿನಗಳ ಬಳಿಕ ಈ ಶ್ರೀಗಂಧದ ಮರಗಳನ್ನು ರಾತ್ರೋ ರಾತ್ರಿ ಕಳವು ಮಾಡಲಾಗಿತ್ತು. ಇವರು ಹಲವು ಶ್ರೀಗಂಧ ಕಳವು ಪ್ರಕರಣಗಳಲ್ಲಿ ಶಾಮೀ ಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.


ಕುಂದಾಪುರ: ಸರಕಾರಿ ನೌಕರನಿಂದಲೇ ಸರಕಾರಿ ಜಾಗ ಒತ್ತುವರಿ
ಕುಂದಾಪುರ, ಜೂ.22: ಕರ್ಕುಂಜೆ ಗ್ರಾಮದ ಸರಕಾರಿ ಜಮೀನು ಸರ್ವೇ ನಂಬ್ರ 246ರಲ್ಲಿ 2.50 ಎಕ್ರೆ ಸ್ಥಳವನ್ನು ಸರಕಾರಿ ನೌಕರರೊಬ್ಬರು ಅತಿಕ್ರಮಣ ಮಾಡಿಕೊಂಡಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸರಕಾರಿ ನೌಕರರಾಗಿರುವ ಕರ್ಕುಂಜೆಯ ಕಿಶೋರಿ ಡಿ.ಶೆಟ್ಟಿ ಸರಕಾರಿ ಜಾಗವನ್ನು ಅನಧಿಕೃತವಾಗಿ ಒತ್ತುವರಿ ಮಾಡಿರುವುದಾಗಿ ಲಕ್ಷ್ಮೀ ಪೂಜಾರ್ತಿ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ವಂಡ್ಸೆ ಹೋಬಳಿಯ ರಾಜಸ್ವ ನಿರೀಕ್ಷಕರಿಂದ ವರದಿ ಪಡೆದು ತೆರವುಗೊಳಿಸುವಂತೆ ಕಿಶೋರ್‌ಗೆ ನೋಟೀಸ್ ನೀಡಿದರೂ ಕೂಡ ಅದಕ್ಕೆ ಮಾನ್ಯತೆ ನೀಡದೆ ಮನೆ ಮತ್ತು ಶೆಡ್‌ನ್ನು ತೆರವುಗೊಳಿಸಿಲ್ಲ. ಇವರು ಸರಕಾರಿ ಜಮೀನನ್ನು ಕಬಳಿಕೆ ಮಾಡುವ ಹುನ್ನಾರದಿಂದ ಜಾಗವನ್ನು ಅತಿಕ್ರಮಣ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಅದಿರು ಲಾರಿ ಪಲ್ಟಿ: ಸಂಚಾರಕ್ಕೆ ಅಡಚಣೆ
ಮಂಗಳೂರು, ಜೂ.22: ಅದಿರನ್ನು ತುಂಬಿಸಿಕೊಂಡು ಮಂಗಳೂರಿನಿಂದ ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ ಲಾರಿಯೊಂದು ಪಲ್ಟಿ ಹೊಡೆದ ಘಟನೆ ಬುಧವಾರ ರಾತ್ರಿ ಪಡೀಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಘಟನೆಯಲ್ಲಿ ಹೆದ್ದಾರಿಯಲ್ಲಿ ಅದಿರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಕೆಲವು ಕಾಲ ವಾಹನ ಸಂಚಾರಕ್ಕೆ ಅಡಚಣೆಉಂಟಾ ಯಿತು. ಸ್ಥಳಕ್ಕೆ ಧಾವಿಸಿದ ಗ್ರಾಮಾಂತರ ಠಾಣಾ ಎಸ್ಸೈ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.


ಇಂದು ಮೃತರ ಅಂತ್ಯಸಂಸ್ಕಾರ
ಉಡುಪಿ, ಜೂ.22: ಮೊವಾಡಿ ಅಪಘಾತದಲ್ಲಿ ಮೃತಪಟ್ಟ ಎಲ್ಲ ಮಕ್ಕಳ ಅಂತ್ಯ ಸಂಸ್ಕಾರವು ಜೂ.23ರಂದು ಗಂಗೊಳ್ಳಿ ಹಾಗೂ ತ್ರಾಸಿ ಚರ್ಚ್‌ಗಳಲ್ಲಿ ನಡೆಯಲಿದೆ.
ಮೃತ ಕ್ಯಾಲಿಸ್ಟ ಒಲಿವೇರಾ, ಕ್ಲಾರಿಸ್ಸಾ ಒಲಿವೇರಾ, ಅಲ್ವಿಟಾ ಒಲಿವೇರಾ, ಅನ್ಸಿಟಾ ಒಲಿವೇರಾ ಹಾಗೂ ಡೆಲ್ವಿನ್ ಡಯಾಸ್‌ರ ಅಂತಿಮ ಸಂಸ್ಕಾರವು ಪೂರ್ವಾಹ್ನ 11ಕ್ಕೆ ಗಂಗೊಳ್ಳಿ ಚರ್ಚ್‌ನಲ್ಲಿ ಹಾಗೂ ನಿಖಿತಾ ಡಿಸಿಲ್ವ, ಅನನ್ಯಾ ಡಿಸಿಲ್ವ, ರಾಯಿಸ್ಟನ್ ಲೋಬೊರ ಅಂತ್ಯ ಸಂಸ್ಕಾರವು ಸಂಜೆ 4ಕ್ಕೆ ನಡೆಯಲಿದೆ

ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು
ಕಾಸರಗೋಡು, ಜೂ.22: ರವಿವಾರದಿಂದ ನಾಪತ್ತೆ ಯಾದ ವ್ಯಕ್ತಿಯೋರ್ವರು ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
 ಬಜಕೂಡ್ಲು ನಿವಾಸಿ ಚನಿಯ ಎಂಬವರ ಪುತ್ರ ಸುಂದರ(43) ಮೃತಪಟ್ಟವರಾಗಿದ್ದಾರೆ. ಕೂಲಿ ಕಾರ್ಮಿ ಕರಾದ ಸುಂದರ ಕಳೆದ ರವಿವಾರ ಸಂಜೆಯಿಂದ ನಾಪ ತ್ತೆಯಾಗಿದ್ದರು. ಅಂದು ರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆ ಯವರು ಹುಡುಕಾಟ ನಡೆಸಿದ್ದರು. ಮನೆಯಿಂದ ಅರ್ಧ ಕಿ. ಮೀ. ದೂರದ ಅನ್ರೋಡಿಯ ಪಾಳು ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕಾಸರಗೋಡು ಅಗ್ನಿಶಾಮಕದಳ, ಬದಿಯಡ್ಕ ಪೊಲೀಸರು ನಾಗರಿಕರ ಸಹಾಯದಿಂದ ಮೃತ ದೇಹವನ್ನು ಮೇಲಕ್ಕೆತ್ತಿದ್ದಾರೆ. ರವಿವಾರದಂದು ರಾತ್ರಿಯೇ ಸುಂದರ ಕೆರೆಗೆ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News