ಬಿಜೆಪಿ ಮುಖಂಡ ಜಯೇಶ್ ಪಟೇಲ್‌ಗೆ ಪೊಲೀಸ್ ರಿಮ್ಯಾಂಡ್
ಅಹ್ಮಬಾದಾಬಾದ್,ಜೂ.23: ಪಾರುಲ್ ವಿವಿಯ ನರ್ಸಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಗುಜರಾತ್‌ನ ಬಿಜೆಪಿಯ ಮುಖಂಡ ಜಯೇಶ್ ಪಟೇಲ್‌ಗೆ ವಡೋದರದ ಸ್ಥಳೀಯ ನ್ಯಾಯಾಲಯ 8 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ತನಗೆ ಸಹಾಯಕನನ್ನು ನೀಡಬೇಕೆಂಬ ಪಟೇಲ್ ಕೋರಿಕೆಯನ್ನು ತಿರಸ್ಕರಿಸಿದ ನ್ಯಾಯಾಲಯ, ಅಗತ್ಯವಿದ್ದರೆ ಪೊಲೀಸರೇ ಪಟೇಲ್‌ಗೆ ಯಾವುದೇ ವೈದ್ಯಕೀಯ ನೆರವಿಗೆ ಮುಂದಾಗಬಹುದು. ಆದರೆ, ಇದೀಗ ಅವರಿಗೆ ಅಂತಹ ಅಗತ್ಯ ಕಾಣುತ್ತಿಲ್ಲ ಎಂದು ಹೇಳಿದೆ.
ವಡೋದರದ ಗ್ರಾಮೀಣ ಠಾಣೆಯ ಪೊಲೀಸರು ಮಂಗಳವಾರ 66 ವರ್ಷದ ಪಟೇಲ್‌ರನ್ನು ಬಂಧಿಸಿದ್ದರು. ಪಟೇಲ್‌ರನ್ನು 8 ದಿನಗಳ ಕಾಲ ತನ್ನ ಕಸ್ಟಡಿಗೆ ಒಪ್ಪಿಸುವಂತೆ ವಡೋದರ ಪೊಲೀಸರು ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಜಯೇಶ್ ಪಟೇಲ್ ತನಿಖೆಗೆ ಅಸಹಕಾರ ತೋರುತ್ತಿದ್ದಾರೆ. ಡಿಎನ್‌ಎ ಪರೀಕ್ಷೆಗೆ ಪಟೇಲ್‌ರಿಂದ ರಕ್ತದ ಮಾದರಿ ಪಡೆಯಲು ವೈದ್ಯಕೀಯ ತಂಡದವರಿಗೆ ಸಾಧ್ಯವಾಗಿಲ್ಲ. ನಾವು ಶೀಘ್ರವೇ ಪಟೇಲ್‌ರ ಸ್ಯಾಂಪಲ್‌ಗಳನ್ನು ಪಡೆಯಲಿದ್ದೇವೆ ಎಂದು ವಡೋದರದ ಎಸ್‌ಪಿ ಸೌರಭ್ ತಾಲುಂಬಿಯಾ ಹೇಳಿದ್ದಾರೆ.
ಖಾಸಗಿಯವರಿಂದ ನಡೆಸಲ್ಪಡುತ್ತಿರುವ ಪಾರುಲ್ ಯುನಿವರ್ಸಿಟಿಯಲ್ಲಿ ಟ್ರಸ್ಟಿ ಆಗಿರುವ ಪಟೇಲ್ ವಿರುದ್ಧ ಶುಕ್ರವಾರ ರಾತ್ರಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಐದು ದಿನಗಳ ಕಾಲ ತಲೆಮರೆಸಿಕೊಂಡಿದ್ದ ಪಟೇಲ್‌ರನ್ನು ಮಂಗಳವಾರ ರಾತ್ರಿ ಬಂಧಿಸಲಾಗಿತ್ತು.