ಅಂಜು ಬಾಬಿ ಜಾರ್ಜ್‌ಗೆ ಕೇಂದ್ರ ಸರಕಾರದ ಖೇಲೋ ಇಂಡಿಯಾಕ್ಕೆ ಕರೆ
Update: 2016-06-23 14:38 IST
ತಿರುವನಂತಪುರಂ,ಜೂನ್ 23: ಕೇರಳ ಸ್ಪೋರ್ಟ್ಸ್ ಕೌನ್ಸಿಲ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ಒಲಿಂಪಿಯನ್ ಅಂಜು ಬಾಬಿ ಜಾರ್ಜ್‌ಗೆ ಕೇಂದ್ರ ಸರಕಾರದ ಹೊಸ ಯೋಜನೆಯಾದ ಖೇಲೊ ಇಂಡಿಯಾಕ್ಕೆ ಆಹ್ವಾನ ನೀಡಲಾಗಿದೆ. ಈ ಯೋಜನೆಯ ಎಕ್ಸಿಕ್ಯೂಟಿವ್ ಕಮಿಟಿಗೆ ಕೇಂದ್ರಸರಕಾರ ಆಮಂತ್ರಿಸಿದ್ದು ಇದರಲ್ಲಿ ಪಾಲ್ಗೊಳ್ಳಲು ಅಂಜು ಸಮ್ಮತಿಸಿದ್ದಾರೆಂದು ವರದಿಯಾಗಿದೆ.
ಗುರುವಾರ ಅಂತಿಮ ತೀರ್ಮಾನ ತಳೆಯುವೆ ಎಂದು ಅಂಜು ಸುದ್ದಿಗಾರರಿಗೆ ತಿಳಿಸಿದ್ದಾರೆ. ಸಾಯ್ ಡೈರೆಕ್ಟರ್ ಜನರಲ್ ಮುಂತಾದವರು ಸಮಿತಿಯ ಇತರ ಸದಸ್ಯರಾಗಿರುತ್ತಾರೆ. ರಾಜೀವ್‌ಗಾಂಧಿ ಖೇಲ್ ಅಭಿಯಾನ್ ಯೋಜನೆಯನ್ನು ಎನ್‌ಡಿಎ ಸರಕಾರ ಖೇಲೊ ಇಂಡಿಯಾ ಎಂದು ಮರು ನಾಮಕರಣಗೊಳಿಸಿದೆ. ದೇಶದ ಎಲ್ಲ ರಾಜ್ಯಗಳಲ್ಲಿ ಈ ಸಮಿತಿ ಕ್ರೀಡೆಯ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವುದು ಹಾಗೂ ಪ್ರತಿ ರಾಜ್ಯಗಳಿಗೂ ಆರ್ಥಿಕ ನೆರವು ನೀಡುವುದು ಮುಂತಾದುದರ ಮೇಲ್ನೋಟವಹಿಸಿಕೊಳ್ಳಲಿದೆ.