×
Ad

ನಿಕ್ಕಿ ಪ್ಯಾಶನ್ ಡೆಸ್ಟಿನೇಶನ್‌ನ 5ನೆ ಮಳಿಗೆ ಉದ್ಘಾಟನೆ

Update: 2016-06-23 16:32 IST

ಮಂಗಳೂರು, ಜೂ.23: ನಗರದ ಕಂಕನಾಡಿಯ ಬೆಂದೂರ್‌ವೆಲ್ ಸರ್ಕಲ್ ಬಳಿಯಿರುವ ಪ್ರೆಸಿಡೆನ್ಸಿ ರೆನ್ 1 ರಲ್ಲಿ ನೂತನವಾಗಿ ಆರಂಭಿಸಲಾದ ‘ನಿಕ್ಕಿ ಫ್ಯಾಶನ್ ಡೆಸ್ಟಿನೇಶನ್‌ನ 5ನೆ ನೂತನ ಬಟ್ಟೆ ಮಳಿಗೆಯನ್ನು ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಹರಿನಾಥ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಐದನೆ ಮಳಿಗೆಯನ್ನು ಆರಂಭಿಸಿರುವ ನಿಕ್ಕಿ ಸಂಸ್ಥೆ ಹಿಂದೆ ಆರಂಭಿಸಲಾದ ನಾಲ್ಕು ಮಳಿಗೆಯಲ್ಲಿ ಯಶಸ್ಸು ಸಾಧಿಸಿ ಬಂದಿದ್ದಾರೆ. ಇಂದು ಬಟ್ಟೆ ವ್ಯಾಪಾರವು ಸ್ಪರ್ಧೆಯನ್ನೆದುರಿಸುತ್ತಿದ್ದು ನೂತನವಾಗಿ ಆರಂಭವಾಗಿರುವ ನಿಕ್ಕಿಯ ನೂತನ ಮಳಿಗೆ ಯಶಸ್ಸು ಸಾಧಿಸಲಿ ಎಂದು ಶುಭಹಾರೈಸಿದರು.

ತಂಙಳ್ ಸೈಯದ್ ಫಲಾಲುದ್ದೀನ್ ದುಆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೂಡ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ನೂತನವಾಗಿ ಆರಂಭಿಸಲಾದ ನಿಕ್ಕಿ ಫ್ಯಾಶನ್‌ನ ಈ ಮಳಿಗೆಯಲ್ಲಿ ಸಂಸ್ಥೆ ಹೆಚ್ಚಿನ ಲಾಭ ಗಳಿಸಲಿ ಎಂದು ಶುಭಹಾರೈಸಿದರು.

ಮನಪಾ ಮಾಜಿ ಮೇಯರ್ ಅಶ್ರಫ್ .ಕೆ ಮಾತನಾಡಿ ನಿಕ್ಕಿ ಸಂಸ್ಥೆ ಹಿಂದೆ ಆರಂಭಿಸಲಾದ ಮಳಿಗೆಯಲ್ಲಿ ಜನರೊಂದಿಗೆ ಉತ್ತಮ ಬಾಂಧವ್ಯದಿಂದ ಯಶಸ್ಸು ಗಳಿಸಿದೆ. ಮಂಗಳೂರಿನಲ್ಲಿ ಆರಂಭವಾಗಿರುವ ಸಂಸ್ಥೆಯು ಯಶಸ್ಸು ಸಾಧಿಸಲಿ ಎಂದು ಶುಭಹಾರೈಸಿದರು.

ಮನಪಾ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ ಮಾತನಾಡಿ ಮಂಗಳೂರು ನಗರ ಅಭಿವೃದ್ದಿ ಹೊಂದುತ್ತಿದ್ದು ನಿಕ್ಕಿ ಸಂಸ್ಥೆಯು ಇರುವ ಬೆಂದೂರ್‌ವೆಲ್ ವೃತ್ತದ ಬಳಿಯೂ ಉತ್ತಮ ಸೌಕರ್ಯವನ್ನು ಕಲ್ಪಿಸಲಾಗಿದೆ. ಇಲ್ಲಿ ಆರಂಭಗೊಂಡಿರುವ ಸಂಸ್ಥೆ ಯಶಸ್ಸನ್ನು ಸಾಧಿಸಲಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ತಂಙಳ್ ಸೈಯದ್ ಜಲಾಲುದ್ದೀನ್, ಪೋರ್‌ವಿಂಡ್ಸ್ ಮಾಲಕ ಇ.ಫೆರ್ನಾಂಡಿಸ್ , ಮನಪಾ ಸದಸ್ಯ ನವೀನ್ ಡಿಸೋಜ, ನಿಕ್ಕಿ ಸಂಸ್ಥೆಯ ಮಾಲಕರಾದ ಮೊಹಮ್ಮದ್ ನವಾಝ್, ನೌಶದ್ ಬೆದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News