ಟೈಟಾನಿಕ್ ಸ್ಟಾರ್ ಲಿಯೊನಾರ್ಡೊ-ಆರೆಸ್ಸೆಸ್ ಮುಖ್ಯಸ್ಥ ಭಾಗವತ್ ಲಂಡನ್‌ನಲ್ಲಿ ಭೇಟಿ?

Update: 2016-06-23 15:11 GMT

ಲಂಡನ್, ಜೂ. 23: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಜುಲೈನಲ್ಲಿ ಬ್ರಿಟನ್‌ಗೆ ಎರಡು ದಿನಗಳ ಭೇಟಿ ನೀಡಲಿದ್ದು, ಈ ಅವಧಿಯಲ್ಲಿ ಆಸ್ಕರ್ ವಿಜೇತ ಹಾಲಿವುಡ್ ನಟ ಲಿಯೊನಾರ್ಡೊ ಡಿಕ್ಯಾಪ್ರಿಯೊ, ಟಿವಿ ಉದ್ಯಮಿ ಸರ್ ಡೇವಿಡ್ ಅಟೆನ್‌ಬೋರೊ ಮತ್ತು ಉದ್ಯಮಿ ರಿಚರ್ಡ್ ಬ್ರಾನ್ಸನ್‌ರನ್ನು ಭೇಟಿಯಾಗಲಿದ್ದಾರೆ.

ಬೀಫ್ ಸೇವನೆಗೆ ನಿಷೇಧ ಹೇರುವುದು ಮತ್ತು ಸಸ್ಯಾಹಾರವನ್ನು ಉತ್ತೇಜಿಸುವ ಆರೆಸ್ಸೆಸ್‌ನ ದೀರ್ಘಾವಧಿಯ ಅಭಿಯಾನಕ್ಕೆ ಡಿಕ್ಯಾಪ್ರಿಯೊ ಮತ್ತು ಬ್ರಾನ್ಸನ್ ಬೆಂಬಲ ನೀಡಲಿದ್ದಾರೆ ಎಂದು ‘ಡೇಲಿ ಒ’ ವರದಿ ಮಾಡಿದೆ.

ಹಿಂದೂ ಸ್ವಯಂಸೇವಕ ಸಂಘ ಏರ್ಪಡಿಸುವ ಸಮಾರಂಭವೊಂದರಲ್ಲಿ ಭಾಗವತ್ ಭಾಗವಹಿಸಲಿದ್ದಾರೆ.

ಡಿಕ್ಯಾಪ್ರಿಯೊ ಸಸ್ಯಾಹಾರಿಯಾಗಿದ್ದು, ಪ್ರಾಣಿ ವಧೆಯ ವಿರುದ್ಧದ ಆಂದೋಲನದಲ್ಲಿ ತೊಡಗಿದ್ದಾರೆ. ಪ್ರಾಣಿ ಕೃಷಿ ಉದ್ದಿಮೆಯ ಪದ್ಧತಿಯ ಬಗ್ಗೆ ರಚಿಸಲಾದ ‘ಕೌಸ್ಪೈರಸಿ: ದ ಸಸ್ಟೇನೆಬಿಲಿಟಿ ಸೀಕ್ರೆಟ್’ ಎಂಬ ಹೆಸರಿನ ಸಾಕ್ಷಚಿತ್ರದ ಕಾರ್ಯಕಾರಿ ನಿರ್ಮಾಪಕ ಅವರಾಗಿದ್ದರು. ಚಿತ್ರದ ಪ್ರೀಮಿಯರ್ ಪ್ರದರ್ಶನವು 2015ರ ಸೆಪ್ಟಂಬರ್‌ನಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಏರ್ಪಟ್ಟಿತ್ತು.

ತಾನು ‘ವೇಗನ್ (ಸಸ್ಯಾಹಾರದ) ಏರ್‌ಲೈನ್’ ಒಂದನ್ನು ಸ್ಥಾಪಿಸುವುದಾಗಿ ಬ್ರಾನ್ಸನ್ 2015ರಲ್ಲಿ ಘೋಷಿಸಿದ್ದರು. ಭಾಗವತ್ ತನ್ನ ಬ್ರಿಟನ್ ಭೇಟಿಯ ವೇಳೆ ಕ್ಯಾಂಟರ್‌ಬರಿಯ ಆರ್ಚ್ ಬಿಶಪ್‌ರನ್ನೂ ಭೇಟಿಯಾಗಲಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News