×
Ad

ಪೊಲೀಸರಿಂದ ದೋಷಾರೋಪಣಾ ಪಟ್ಟಿ ಸಲ್ಲಿಕೆ: ನರೇಶ್ ಶೆಣೈ ಪ್ರಮುಖ ಆರೋಪಿ

Update: 2016-06-23 22:55 IST

ಮಂಗಳೂರು, ಜೂ.23: ನಗರದ ಆರ್‌ಟಿಐ ಕಾರ್ಯಕರ್ತ ವಿನಾಯಕ ಎಂ.ಬಾಳಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ನಗರ ಪೊಲೀಸರು ಮಂಗಳೂರು ನ್ಯಾಯಾಲಯಕ್ಕೆ 770 ಪುಟಗಳುಳ್ಳ ಪ್ರಾಥಮಿಕ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ.

 ದೋಷಾರೋಪಣ ಪಟ್ಟಿಯಲ್ಲಿ ನರೇಶ್ ಶೆಣೈಯನ್ನು ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ. ಶ್ರೀಕಾಂತ್, ಶಿವ, ವಿನೀತ್ ಪೂಜಾರಿ, ನಿಶಿತ್ ದೇವಾಡಿಗ, ಶೈಲೇಶ್ ಮತ್ತು ಮಂಜುನಾಥ ಶೆಣೈ ಇತರ ಆರೋಪಿಗಳಾಗಿ ತಿಳಿಸಲಾಗಿದೆ.

ಪ್ರಕರಣದ ತನಿಖಾಧಿಕಾರಿಯಾಗಿರುವ ಎಸಿಪಿ ತಿಲಕ್‌ಚಂದ್ರ ಅವರು ಮಂಗಳೂರಿನ 3ನೆ ಹೆಚ್ಚುವರಿ ನ್ಯಾಯಾಲಯಕ್ಕೆ ದೋಷಾರೋಪಣಾಪಟ್ಟಿಯನ್ನು ಸಲ್ಲಿಸಿದ್ದಾರೆ.
ಪ್ರಮುಖ ಆರೋಪಿಯಾಗಿರುವ ನರೇಶ್ ಶೆಣೈಯ ಬ್ಯಾಂಕ್ ಖಾತೆಯನ್ನು ಸ್ತಬ್ಧಗೊಳಿಸಿದ ಮಾಹಿತಿ, ಆತನಲ್ಲಿದ್ದ ನಾಲ್ಕೈದು ದ್ವಿಚಕ್ರವಾಹನಗಳು, ಆರೋಪಿಗಳು ಕೊಲೆಗೆ ಬಳಸಿದ ಆಯುಧಗಳು, ಆಟೋರಿಕ್ಷಾ, ಕ್ವಾಲಿಸ್ ಕಾರು, ರಿಟ್ಜ್ ಕಾರುಗಳನ್ನು ಸ್ವಾಧೀನಪಡಿಸಿರುವುದನ್ನು ವಿವರಿಸಲಾಗಿದೆ. ಹೆಚ್ಚುವರಿ ಆರೋಪಪಟ್ಟಿಯನ್ನು ಪೊಲೀಸರು ಶೀಘ್ರ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News