ಬಾವಿಗೆ ಬಿದ್ದ ಗಾಯಾಳು ಮೃತ್ಯು
Update: 2016-06-23 23:34 IST
ಅಜೆಕಾರು, ಜೂ.23: ಕಡ್ತಲ ಗ್ರಾಮದ ತೀರ್ಥೊಟ್ಟು ಸೇತುವೆ ಸಮೀಪ ಸಿರಿಬೈಲು ಎಂಬಲ್ಲಿ ಬಾವಿಯ ಕೆಲಸ ಮಾಡುತ್ತಿದ್ದ ವೇಳೆ ಬಾವಿಗೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಮರ್ಣೆ ಗ್ರಾಮದ ಬೊಂಡುಕುಮೇರಿಯ ಕರುಣಾಕರ ಎಂದು ಗುರುತಿಸಲಾಗಿದೆ. ಜೂ.17ರಂದು ಇಂದಿರಾ ಭಾಸ್ಕರ ಹೆಗ್ಡೆ ಎಂಬವರ ಬಾವಿಯ ಕೆಲಸ ಮಾಡುತ್ತಿದ್ದ ವೇಳೆ ಕರುಣಾಕರ್ ಮೇಲಿನಿಂದ ಬಾವಿಗೆ ಇಣುಕಿ ನೋಡಿದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಬುಧವಾರ ರಾತ್ರಿ 10ಗಂಟೆ ಸುಮಾರಿಗೆ ಚಿಕಿತ್ಸೆಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.