×
Ad

ನಾಳೆ ಟೋಲ್‌ಗೇಟ್ ವಿರುದ್ಧ ಪ್ರತಿಭಟನೆ

Update: 2016-06-23 23:36 IST


ಪಡುಬಿದ್ರೆ, ಜೂ.23: ಹೆಜಮಾಡಿಯಲ್ಲಿ ನಿರ್ಮಾಣವಾಗುತ್ತಿರುವ ಟೋಲ್‌ಗೇಟ್ ಮತ್ತು ಟ್ರಕ್ ಯಾರ್ಡ್‌ನಿಂದ ಈ ಭಾಗದ ಜನರಿಗಾಗುತ್ತಿರುವ ಸಮಸ್ಯೆಯನ್ನು ಪರಿಹರಿಸಬೇಕು ಹಾಗೂ ಗ್ರಾಮಸ್ಥರ ವಿವಿಧ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿ ಸಬೇಕು ಎಂದು ಒತ್ತಾಯಿಸಿ ಜೂ.25ರಂದು ಬೆಳಿಗ್ಗೆ 10ಕ್ಕೆೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಗುರುವಾರ ಪಡುಬಿದ್ರೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗರಿಕ ಸಮಿತಿ ಅಧ್ಯಕ್ಷ ಗುಲಾಂ ಮುಹಮ್ಮದ್ ಹೇಳಿದರು. ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಆದರೂ ಏಕಾಏಕಿ ಟೋಲ್‌ಗೇಟ್ ಆರಂಭಿಸಲಾಗಿದೆ. ಕಾಮಗಾರಿ ಪೂರ್ಣಗೊಳ್ಳದೆ ಸುಂಕ ವಸೂಲಿ ಮಾಡಬಾರದು. ಅಲ್ಲದೆ ಟೋಲ್‌ನಲ್ಲಿ ಹೆದ್ದಾರಿಗಾಗಿ ಜಮೀನು ಕಳೆದು ಕೊಂಡ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭ ಸಮಿತಿಯ ಪ್ರಧಾನ ಕಾರ್ಯದರ್ಶಿ ಶೇಖರ ಹೆಜಮಾಡಿ, ಉಪಾಧ್ಯಕ್ಷ ಪಾಂಡುರಂಗ ಕರ್ಕೇರ, ಮಹೇಶ್ ಸಾಲ್ಯಾನ್,ರಕ್ಷಿತ್, ವಸಂತ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News