ಕುಂದಾಪುರ ಪುರಸಭಾ ಅಧಿಕಾರಿಗಳಿಂದ ದಾಳಿ: ನಿಷೇಧಿತ ಪ್ಲಾಸ್ಟಿಕ್ ವಶ
Update: 2016-06-23 23:37 IST
ಕುಂದಾಪುರ, ಜೂ.23: ಅರಣ್ಯ ಪರಿಸರ ಮತ್ತು ಜೀವ ವಿಜ್ಞಾನ ಇಲಾಖೆಯ ಅಧಿಸೂಚನೆಯ ಯಂತೆ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮತ್ತು ಮಾರಾಟ ನಿರ್ಬಂಧಿಸುವ ಸಲುವಾಗಿ ಕುಂದಾಪುರ ಪುರಸಭಾ ಮುಖ್ಯಾಧಿಕಾರಿಗಳ ನೇತೃತ್ವದಲ್ಲಿ ಪುರಸಭಾ ತಂಡದಿಂದ ಪರಿಶೀಲನೆ ಮತ್ತು ದಾಳಿ ನಡೆಸಲಾಯಿತು.
ಪರಿಶೀಲನೆ ಸಮಯದಲ್ಲಿ ಸುಮಾರು 20ಕೆ.ಜಿ ನಿಷೇಧಿತ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಕುಂದಾಪುರ ಪುರಸಭಾ ವ್ಯಾಪ್ತಿಯ ಹಲವು ಅಂಗಡಿ, ಮಾರುಕಟ್ಟೆ, ಹೊಟೇಲ್, ಡೀಲರ್‌ಗಳಿಂದ ವಶಪಡಿಸಿಕೊಳ್ಳಲಾಯಿತು. ಸದ್ರಿ ದಾಳಿಯಲ್ಲಿ ಮುಖ್ಯಾಧಿಕಾರಿಗಳು, ಪರಿಸರ ಅಭಿಯಂತರರು, ಹಿರಿಯ ಆರೋಗ್ಯ ನಿರೀಕ್ಷರು ಹಾಗೂ ಕಚೆೇರಿಯ ಸಿಬ್ಬಂದಿಯೊಂದಿಗೆ ಪಾಲ್ಗೊಂಡಿದ್ದರು. ದಾಳಿ ನಡೆಸಿದ ಸಂದರ್ಭದಲ್ಲಿ ವರ್ತಕರಿಗೆ ಹಾಗೂ ಸಾರ್ವಜನಿಕರಿಗೆ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅಗತ್ಯ ಮಾಹಿತಿ ಮತ್ತು ತಿಳುವಳಿಕೆ ನೀಡಲಾಯಿತು.