ಅಕ್ರಮ ಜಾನುವಾರು ಸಾಗಾಟ: ಸೆರೆ
Update: 2016-06-23 23:40 IST
ಮುಲ್ಕಿ, ಜೂ.23: ಅಕ್ರಮ ಸಾಗಾಟ ಮಾಡುತ್ತಿದ್ದ ಜಾನುವಾರುಗಳ ಸಹಿತ ಆರೋಪಿಯನ್ನು ಗುರುವಾರ ಮುಂಜಾನೆ ಸುಮಾರು 5:30ರ ಸುಮಾರಿಗೆ ವಶಕ್ಕೆ ಪಡೆದಿರುವ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ.
ಬಂಧಿತನನ್ನು ಇಬ್ರಾಹೀಂ ಎಂದು ಗುರುತಿಸಲಾಗಿದ್ದು, ವಾಹನದಲ್ಲಿದ್ದ ನಾಲ್ಕು ದನಗಳು ಹಾಗೂ ಐದು ಕರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಗುರುವಾರ ಬೆಳಗ್ಗೆ ಮುಲ್ಕಿ ಬಪ್ಪನಾಡು ಚೆಕ್ ಪಾಯಿಂಟ್ ಬಳಿ ಅನುಮಾನಾಸ್ಪದವಾಗಿ ಪಡುಬಿದ್ರೆಯಿಂದ ಮಂಗಳೂರಿನೆಡೆ ಸಾಗುತ್ತಿದ್ದ ಪಿಕಪ್ ವಾಹನವನ್ನು ತಪಾಸಣೆ ನಡೆಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.