ಬ್ರಿಟನ್ ಯುರೋಪ್ ಯೂನಿಯನ್‌ನಿಂದ ಹೊರಕ್ಕೆ: ಪೌಂಡ್ ದರ ದಿಢೀರ್ ಕುಸಿತ!
ಲಂಡನ್, ಜೂನ್ 24: ಬ್ರಿಟನ್ ಯುರೋಪಿಯನ್ ಯೂನಿಯನ್‌ನಲ್ಲಿ ಮುಂದುವರಿಯಬೇಕಿಲ್ಲ ಎಂಬ ಸೂಚನೆಯಿರುವ ಜನಮತ ಗಣನೆಯ ಪ್ರಾಥಮಿಕ ಹಂತದ ಫಲಿತಾಂಶಗಳು ಹೊರಬರಲು ಆರಂಭಗೊಂಡಿವೆ. 383 ವೋಟಿಂಗ್ ಕೇಂದ್ರಗಳಲ್ಲಿ 15ರ ಫಲಿತಾಂಶ ಹೊರಗೆ ಬಂದಾಗ ಬ್ರೇಕ್‌ಸಿಟ್ ಪರರು ಶೇ. 50.2 ಮತಗಳಿಂದ ಮುನ್ನಡೆ ಗಳಿಸಿದ್ದಾರೆ. ಶೇ. 49.8 ಮಂದಿ ಮಾತ್ರ ಬ್ರಿಟನ್ ಯುರೋಪಿಯನ್ ಯೂನಿಯನ್‌ನಲ್ಲೇ ಮುಂದುವರಿಯಬೇಕೆಂದು ಮತದಾನ ಮಾಡಿದ್ದಾರೆ.
ಬ್ರಿಟನ್‌ನ ಈಶಾನ್ಯದ ಪ್ರದೇಶಗಳು ಬ್ರೇಕ್ ಸಿಟ್ ಪರವಿರುವುದರಿಂದ ಸ್ಕಾಟ್‌ಲೆಂಡ್ ರಿಮೈನ್(ಸ್ಕಾಟ್‌ಲೆಂಡ್ ಪ್ರತ್ಯೇಕತಾವಾದ) ವಾದ ಮತ್ತೆ ಗರಿಕೆದರಿ ಬಲಶಾಲಿಯಾಗಲಿದೆ ಎನ್ನಲಾಗುತ್ತಿದೆ.
ಜನಮತಗಣನೆಯ ಫಲಿತಾಂಶ ಸಂಪೂರ್ಣಗೊಳ್ಳಲು ಇನ್ನು ಕೆಲವು ಗಂಟೆಗಳು ಅಗತ್ಯವಿದೆ. ಸಾರ್ವತ್ರಿಕ ಚುನಾವಣೆಗಿಂತಲೂ ಹೆಚ್ಚು ಆಸಕ್ತಿಯಿಂದ ಮತದಾನದಲ್ಲಿ ಜನರು ಭಾಗವಹಿಸಿದ್ದಾರೆ. ಬ್ರೇಕ್‌ಸಿಟ್ ವಿಜಯಿಯಾಗಬಹುದು ಎಂದುಚುನಾವಣೆಯ ತಜ್ಞರು ಪ್ರತಿಕ್ರಿಯೆ ನೀಡಿದ್ದಾರೆ. ಯುರೋಪಿಯನ್ ಯೂನಿಯನ್‌ನಿಂದ ಬ್ರಿಟನ್ ಹೊರಹೋಗುವುದು ಶತ ಸಿದ್ಧ ಎಂಬ ಅಭಿಪ್ರಾಯಗಳೂ ಕೇಳಿ ಬರಲಾರಂಬಿಸಿದೆ.
382 ಪ್ರಾದೇಶಿಕ ಬೂತ್‌ಗಳಿದ್ದು ಇಂಗ್ಲೆಂಡ್, ಸ್ಕಾಟ್‌ಲೆಂಡ್, ವೇಯ್ಲಾಸ್, ಸೇರಿ 380 ಮತ ಎಣಿಕೆ ಕೇಂದ್ರಗಳಿವೆ. ಉಳಿದ ಕೇಂದ್ರಗಳು ಆಯರ್ಲೆಂಡ್‌ನಲ್ಲೊಂದು ಮತ್ತುಜಿಬ್ರಾಲ್ಟರ್‌ನಲ್ಲೊಂದಿದ್ದು ಎಲ್ಲ ಕೇಂದ್ರಗಳ ಫಲಿತಾಂಶ ಬಂದ ಮೇಲೆ ಕೌಂಟಿಂಗ್ ಮುಖ್ಯ ಅಧಿಕಾರಿಯಾದ ಜಿಮ್ಮಿ ವಾಟ್ಸನ್‌ಮ್ಯಾಂಚೆಸ್ಟರ್ ಟೌನ್‌ಹಾಲ್‌ನಲ್ಲಿ ಐತಿಹಾಸಿಕ ಘೋಷಣೆಯನ್ನು ಮಾಡಲಿದ್ದಾರೆ.