ಪೆರುವಾಜೆ: ಬೈಕ್ ಸ್ಕಿಡ್ ಆಗಿ ಸವಾರ ಮೃತ್ಯು
Update: 2016-06-24 16:23 IST
ಸುಳ್ಯ, ಜೂ.24: ಬೈಕ್ ಸ್ಕಿಡ್ ಆಗಿ ಸವಾರ ಮೃತಪಟ್ಟ ಘಟನೆ ಪೆರುವಾಜೆ ಗ್ರಾಮದ ಕೊಂಡೆಪ್ಪಾಡಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಪುತ್ತೂರು ತಾಲೂಕಿನ ಪುಣ್ಚಪ್ಪಾಡಿಯ ಸತೀಶ್ ಬೈಕ್‌ನಲ್ಲಿ ಬೆಳ್ಳಾರೆಯಿಂದ ಸವಣೂರು ಕಡೆಗೆ ಹೋಗುತ್ತಿದ್ದಾಗ ಪೆರುವಾಜೆಯ ಕೊಂಡೆಪ್ಪಾಡಿಯಲ್ಲಿ ಬೈಕ್ ಸ್ಕಿಡ್ ಆಗಿ ಮೃತಪಟ್ಟಿದ್ದಾರೆ.
ಮೃತ ದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿ ಮೃತರ ಮನೆಗೆ ಕೊಂಡೊಯ್ಯಲಾಯಿತು.
ಪುಣ್ಚಪ್ಪಾಡಿ ಗ್ರಾಮದ ನೂಜಾಜೆ ನಾರಾಯಣ ನಾಯ್ಕರ ಪುತ್ರ ಸತೀಶ್ ಪತ್ರಿಕೋದ್ಯಮ ಪದವಿ ಪಡೆದಿದ್ದರು. ಗುರುವಾರ ಸತೀಶರ ಸಹೋದರಿಯ ವಿವಾಹ ನಿಶ್ಚಿತಾರ್ಥವು ಮನೆಯಲ್ಲಿ ನಡೆದಿತ್ತು. ಇದಕ್ಕಾಗಿ ಬಂಧುಗಳು ಆಗಮಿಸಿದ್ದರು. ಈ ಪೈಕಿ ದೊಡ್ಡಮ್ಮನನ್ನು ಬಸ್ಸಿಗೆ ಬಿಡಲೆಂದು ಬೆಳ್ಳಾರೆಗೆ ಬಂದು ವಾಪಸ್ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ.