ಜೂ.25ರಂದು ಮೂಳೂರು ಮರ್ಕಝ್‌ನಲ್ಲಿ ಸಾಮೂಹಿಕ ಇಫ್ತಾರ್ ಕೂಟ
ಉಡುಪಿ, ಜೂ.25: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರಿನ ಅಧೀನ ಸಂಸ್ಥೆ ಮೂಳೂರು ಮರ್ಕಝ್ ತಅಲೀಮಿಲ್ ಇಹ್ಸಾನ್‌ನಲ್ಲಿ ದಿನಾಂಕ ಜೂ.25ರಂದು ರಮಝಾನ್ ಪ್ರಭಾಷಣ ಮತ್ತು ಸಾಮೂಹಿಕ ಇಫ್ತಾರ್ ಕೂಟ ನಡೆಯಲಿದೆ.
ಲುಹ್ರ್ ನಮಾಝ್‌ನ ನಂತರ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಡಿಕೆಎಸ್ಸಿ ಕೇಂದ್ರ ಸಮಿತಿ ಮತ್ತು ಮರ್ಕಝ್ ಆಡಳಿತ ಸಮಿತಿಯ ಅಧ್ಯಕ್ಷ ಅಸೈಯದ್ ಕೆ.ಎಸ್. ಆಟಕ್ಕೋಯ ತಂಙಳ್ ಅಧ್ಯಕ್ಷತೆ ವಹಿಸಲಿದ್ದು ಮೂಳೂರು ಮುದರ್ರಿಸ್ ಅಬ್ದುರ್ರಹ್ಮಾನ್ ಮದನಿ ಉದ್ಘಾಟಿಸಲಿದ್ದಾರೆ.
ನಂತರ ‘ಇಸ್ಲಾಮಿನಲ್ಲಿ ಆರ್ಥಿಕ ವ್ಯವಹಾರಗಳು ಮತ್ತು ಈದ್ ನಮಾಝ್’ ಎಂಬ ವಿಷಯದಲ್ಲಿ ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಹಾಗೂ ಮೂಳೂರು ಅಲ್ ಇಹ್ಸಾನ್ ಶರೀಅತ್ ಕಾಲೇಜಿನ ಪ್ರಾಂಶುಪಾಲ ಅಲ್‌ಹಾಜಿ ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ತರಗತಿಯನ್ನು ಮಂಡಿಸಲಿದ್ದಾರೆ. ಅಸರ್ ನಮಾಜಿನ ಬಳಿಕ ನಡೆಯುವ ಜಲಾಲಿಯಾ ಮಜ್ಲಿಸಿನ ನೇತೃತ್ವವನ್ನು ಕುಂಬೋಲ್ ಸಾದಾತ್‌ಗಳು ವಹಿಸಲಿದ್ದು ನಂತರ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ.
ನಂತರ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯುಎಇ ರಾಷ್ಟ್ರೀಯ ಸಮಿತಿ ವತಿಯಿಂದ ಸಂಸ್ಥೆಯ ಮಕ್ಕಳು ಮತ್ತು ಕುಂಬೋಲ್ ಸಾದಾತ್‌ಗಳ ಸಾನಿಧ್ಯದಲ್ಲಿ ಸಾಮೂಹಿಕ ಇಫ್ತಾರ್ ಕೂಟ ನಡೆಯಲಿದೆ. ಕಾರ್ಯಕ್ರಮದಲ್ಲಿ ಅಬ್ದುಲ್ ಖಾದಿರ್ ಜಬ್ಬಾರ್ ಮಸ್ತಾನ್ ಉಪ್ಪಾಪ, ಡಿಕೆಎಸ್ಸಿ ಪ್ರತಿನಿಧಿಗಳು ಹಾಗೂ ಇನ್ನಿತರ ಉಲಮಾ ಉಮರಾಗಳು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮ್ಯಾನೇಜರ್ ಮೌಲಾನಾ ಯು.ಕೆ. ಮುಸ್ತಫಾ ಸಅದಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.