×
Ad

ಕಲ್ಲಡ್ಕ: ಹೆದ್ದಾರಿಗೆ ಉರುಳಿದ ಮರದಿಂದ ಪಾದಚಾರಿಗಳಿಗೆ ತೊಂದರೆ

Update: 2016-06-24 18:04 IST

ಬಂಟ್ವಾಳ, ಜೂ.24: ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಬದಿಯ ಗುಡ್ಡೆ ಜರಿದು ಮರವೊಂದು ರಸ್ತೆಗೆ ಉರುಳಿ ಬಿದ್ದಿದ್ದು, ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಮರ ಉರುಳಿ ಬಿದ್ದು ಎರಡು ದಿನಗಳು ಕಳೆದರೂ ಸ್ಥಳೀಯ ಪಂಚಾಯತ್ ಆಡಳಿತ ಮರ ತೆರವುಗೊಳಿಸುವ ಗೋಜಿಗೆ ಹೋಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಈ ಮರವನ್ನು ತೆರವುಗೊಳಿಸಲು ಪಂಚಾಯತ್ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News