×
Ad

ಸುಳ್ಯ: ಅರಣ್ಯವಾಸಿ ಚಂದ್ರಶೇಖರ್‌ಗೆ ಭೂಮಿ ಮಂಜೂರು

Update: 2016-06-24 18:15 IST

ಸುಳ್ಯ, ಜೂ.24: ತನ್ನ ಜಾಗ ಕಳೆದುಕೊಂಡ ಬಳಿಕ ಕಳೆದ 12 ವರ್ಷಗಳಿಂದ ಕಾಡಿನಲ್ಲಿ ವಾಸವಾಗಿದ್ದ ನೆಲ್ಲೂರು ಕೆಮ್ರಾಜೆಯ ಚಂದ್ರಶೇಖರರಿಗೆ ಕಂದಾಯ ಇಲಾಖೆಯಿಂದ 1 ಎಕ್ರೆ ಜಾಗ ಮಂಜೂರುಗೊಂಡಿದೆ.

ಸಹಕಾರಿ ಸಂಘದಲ್ಲಿ ಮಾಡಿದ್ದ ಸಾಲದ ಮರುಪಾವತಿಗಾಗಿ ಸಹಕಾರಿ ಸಂಘದವರು ಚಂದ್ರಶೇಖರರ ಜಾಗವನ್ನು ಏಲಂ ಮಾಡಿದ್ದರು. ಅದಾದ ಬಳಿಕ ಚಂದ್ರಶೇಖರ್ ಅವರು, ಸಹಕಾರಿ ಸಂಘದವರು ತನ್ನ ಗಮನಕ್ಕೆ ಬಾರದೆ ನನ್ನ ಜಮೀನನ್ನು ಏಲಂ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರಲ್ಲದೆ ಅಡ್ತಲೆಯ ಕಾಡಿಗೆ ಹೋಗಿ ಒಬ್ಬಂಟಿಯಾಗಿ ವಾಸವಾಗಿದ್ದರು.

ಕಳೆದ 12 ವರ್ಷಗಳಿಂದ ಕಾಡಿನಲ್ಲಿ ವಾಸವಾಗಿರುವ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿಗಳು ಚಂದ್ರಶೇಖರರು ವಾಸವಾಗಿದ್ದ ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಸ್ವೀಕರಿಸಿ ಜಾಗ ಕೊಡಿಸುವ ಭರವಸೆ ನೀಡಿದ್ದರು. ಬಳಿಕ ಈ ಪ್ರಕ್ರಿಯೆ ಚುರುಕುಗೊಂಡು ಗುರುವಾರ ಸುಳ್ಯ ತಾಲೂಕು ಕಚೇರಿಯಲ್ಲಿ ಶಾಸಕ ಎಸ್.ಅಂಗಾರರ ಅಧ್ಯಕ್ಷತೆಯಲ್ಲಿ ನಡೆದ ಅಕ್ರಮ ಸಕ್ರಮ ಬೈಠಕ್‌ನಲ್ಲಿ ಚಂದ್ರಶೇಖರರಿಗೆ 1 ಎಕ್ರೆ ಜಾಗವನ್ನು ಮಂಜೂರು ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News