ನೈನಾಡು: ಸಡಗರದಿಂದ ಚುನಾವಣೆಯಲ್ಲಿ ಪಾಲ್ಗೊಂಡ ಮತದಾರರು!

Update: 2016-06-24 13:05 GMT

ಬಂಟ್ವಾಳ, ಜೂ. 24: ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸುವ ಮೂಲಕ ಬಂಟ್ವಾಳ ತಾಲೂಕಿನಲ್ಲಿ ಗಮನ ಸೆಳೆದಿದ್ದ ಗ್ರಾಮೀಣ ಪ್ರದೇಶ ನೈನಾಡು ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆಸಿ ಶಾಲಾ ಸಂಸತ್ತು ರಚಿಸಿದ್ದಾರೆ.

ಪುಸ್ತಕ ಚಿಹ್ನೆಯಡಿ ಸ್ಪರ್ಧಿಸಿದ್ದ 10ನೆ ತರಗತಿ ವಿದ್ಯಾರ್ಥಿನಿ ಭವ್ಯಾ ಶಾಲಾ ನಾಯಕಿಯಾಗಿ ಆಯ್ಕೆಯಾಗಿದ್ದು, ಒಂಬತ್ತನೆ ತರಗತಿ ವಿದ್ಯಾರ್ಥಿ ನೆವಿಲ್ ಲಸ್ರಾದೊ ಉಪನಾಯಕನಾಗಿ ಆಯ್ಕೆಗೊಂಡಿದ್ದಾರೆ.

ಕಾರ್ಯದರ್ಶಿಯಾಗಿ 10ನೆ ತರಗತಿ ವಿದ್ಯಾರ್ಥಿನಿ ಲಾವಣ್ಯ ಆಯ್ಕೆಗೊಂಡರು. ಕ್ರೀಡಾ ಮಂತ್ರಿಯಾಗಿ 9ನೆ ತರಗತಿ ವಿದ್ಯಾರ್ಥಿನಿ ತೇಜಶ್ರೀ ಗೆಲುವು ದಾಖಲಿಸಿದರು. ಇವರಿಗೆ ಪುಸ್ತಕ, ಪೆನ್ನು, ಸೂರ್ಯ, ಹೂವು, ಚೆಂಡು ಮತ್ತಿತರ ಚಿಹ್ನೆ ನೀಡಲಾಗಿದ್ದು, ಚುನಾವಣಾಧಿಕಾರಿಯಾಗಿ ಶಿಕ್ಷಕ ಪ್ರಕಾಶ  ಕಾರ್ಯ ನಿರ್ವಹಿಸಿದ್ದರು. ಮುಖ್ಯಶಿಕ್ಷಕ ಅಶೋಕ್ ಕುಮಾರ್ ಸಹಿತ ಇತರ ಶಿಕ್ಷಕರು ಮತದಾನ ಪ್ರಕಿಯೆಯಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News