ಸುಳ್ಯ: ಕೆವಿಜಿಐಪಿಎಸ್‌ನ ವಿದ್ಯಾರ್ಥಿ ಸಂಘದ ಪದಗ್ರಹಣ
ಸುಳ್ಯ, ಜೂ.24: ಸುಳ್ಯ ಕೆವಿಜಿಐಪಿಎಸ್‌ನ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭ ಅಮರಶ್ರೀ ಬಾಗ್‌ನಲ್ಲಿರುವ ಕೆ.ವಿ.ಜಿ. ಸಮುದಾಯ ಭವನದಲ್ಲಿ ನಡೆಯಿತು.
ಶಾಲಾ ಪ್ರಾಂಶುಪಾಲ ಪಿ.ಭುಜಂಗಶೆಟ್ಟಿ ಅವರು ಚುನಾಯಿತ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.ಶಾಲಾ ವಿದ್ಯಾರ್ಥಿ ನಾಯಕ ಮೊಯ್ದೀನ್ ಅನ್ಸಪ್.ಎನ್. ಹಾಗೂ ನಾಯಕಿ ವೈಷ್ಣವಿ ಬಾಲಕೃಷ್ಣ, ಉಪನಾಯಕ ನಿತಿನ್.ಪಿ.ಕೆ. ಮತ್ತು ಉಪನಾಯಕಿ ಅಮಿಷಾ ಬಿ. ಸೋಮಯಾಗಿ ಹಾಗೂ ಇತರ ಖಾತೆಗಳ ಎಲ್ಲ ಸಚಿವರುಗಳೂ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.
ಸುಳ್ಯ ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಕೃಷ್ಣಯ್ಯ ಅತಿಥಿಗಳಾಗಿದ್ದರು. ವಿದ್ಯಾರ್ಥಿಗಳು ನಾಯಕತ್ವಗುಣಗಳನ್ನು ಬೆಳೆಸಿಕೊಳ್ಳಲು ಇಂತಹ ವಿದ್ಯಾರ್ಥಿ ಸಂಘಗಳು ಸಹಕಾರಿ. ನಾಯಕರಾದವರು ತಾವು ಬೆಳೆಯುವುದರ ಜೊತೆಗೆ ಇತರರನ್ನೂ ಬೆಳೆಸಬೇಕು ಸ್ವತಂತ್ರ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸ್ವಸ್ಥ ಸಮಾಜದ ಹರಿಕಾರರಾಗಬೇಕು ಎಂದವರು ಹೇಳಿದರು.
ಕೆವಿಜಿ ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪಡ್ಡಂಬೈಲು ವೆಂಕಟ್ರಮಣ ಗೌಡ ಅಧ್ಯಕ್ಷತೆ ವಹಿಸಿದ್ದರು. ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ.ಯಶೋಧಾ ರಾಮಚಂದ್ರ, ಶಾಲಾ ಕಾರ್ಯನಿರ್ವಹಣಾಧಿಕಾರಿ ಎನ್.ಜಿ. ರಾಮಚಂದ್ರ, ಕೆ.ವಿ.ಜಿ. ಐ.ಟಿ.ಐನ ಪ್ರಾಂಶುಪಾಲ ಚಿದಾನಂದ ಬಾಳಿಲ, ಪ್ರೊ. ಉಜ್ವಲ್.ಯು.ಜೆ, ಮಾಧವ.ಬಿ.ಟಿ, ಉಪಸ್ಥಿತರಿದ್ದರು.
ಮನ್ವಿತಾ ಸ್ವಾಗತಿಸಿ, ಪೂರ್ವಿ ನವೀನ್ ವಂದಿಸಿದರು. ಪಾತಿಮತ್ ಶಿದಾ, ಝೈನಾಬ್ ಝಿನ್ನೀರಾ, ಶೃಂಗಾ, ಆಶಾ ಕಾವ್ಯ ಕಾರ್ಯಕ್ರಮ ನಿರೂಪಿಸಿದರು.