ಕುಂದಾಪುರ: ಜಾಮಿಯ ಮಸೀದಿಯಲ್ಲಿ ತ್ರಾಸಿ ದುರಂತದಲ್ಲಿ ಮಡಿದ ಕಂದಮ್ಮಗಳಿಗೆ ಸಂತಾಪ
Update: 2016-06-24 19:39 IST
ಕುಂದಾಪುರ, ಜೂ.24: ತ್ರಾಸಿ ಮೊವಾಡಿ ಬಳಿ ಸಂಭವಿಸಿದ ಅಪಘಾತದಲ್ಲಿ ಮಡಿದ ಕಂದಮ್ಮಗಳಿಗೆ ಕುಂದಾಪುರ ಜಾಮಿಯ ಮಸೀದಿಯಲ್ಲಿ ಶುಕ್ರವಾರ ಸಂತಾಪ ಸಲ್ಲಿಸಲಾಯಿತು.
ಜುಮಾ ನಮಾಜಿನ ಬಳಿಕ ಮಸೀದಿಯ ಖತೀಬ್ ಅಬ್ದುರ್ರಹ್ಮಾನ್ ಮಾತನಾಡಿ, ನಡೆಯ ಬಾರದ ಕರಾಳ ಘಟನೆಯೊಂದು ನಡೆದು ಹೋಗಿದೆ. ಇನ್ನೂ ಅರಳದ ದೇವರ ತೋಟದ ಕುಸುಮಗಳು ಮುದುಡಿಹೋಗಿವೆ. ಆ ಮುಗ್ಧ ಕಂದಮ್ಮಗಳ ಆತ್ಮಗಳಿಗೆ ದೇವರ ಆಸ್ಥಾನದಲ್ಲಿ ಶಾಂತಿ ಲಭಿಸಲಿ. ಹೊತ್ತಲ್ಲದ ಹೊತ್ತಿನಲ್ಲಿ ತಮ್ಮ ಕರುಳ ಕುಡಿಗಳನ್ನು ಅಗಲಿರುವ ಹೆತ್ತವರಿಗೆ, ಪೋಷಕರಿಗೆ ದೇವರು ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಈ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ ಮುಸ್ಲಿಮ್ ಬಾಂಧವರು ಮರೆಯಾದ ಮುಗ್ಧ, ಪುಟ್ಟ ಜೀವಗಳಿಗೆ ಶೃದ್ಧಾಂಜಲಿ ಕೋರಿದರು. ಇದೇ ಸಂದರ್ಭದಲ್ಲಿ ಸ್ಥಳೀಯ ಅಂಜುಮನ್ ಮುಸ್ಲಿಮೀನ್ ಸಂಸ್ಥೆ, ಜಮ್ಯಿಯತುಲ್, ಫಲಾಹ್, ಮುಸ್ಲಿಮ್ ವೆಲ್ಫೇರ್ ಘಟಕಗಳೂ ಭಾಗವಹಿಸಿ ತಮ್ಮ ಅಶ್ರುತರ್ಪಣವನ್ನು ಸಲ್ಲಿಸಿದವು.