×
Ad

ದ.ಕ. ಜಿಲ್ಲೆಯಲ್ಲಿ 15.81 ಲಕ್ಷ ಜನರಿಗೆ ಪೌರತ್ವ ಕಾರ್ಡ್

Update: 2016-06-24 23:47 IST

ಮಂಗಳೂರು, ಜೂ.24: ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಅನ್ವಯ ಜಿಲ್ಲೆಯ 15,81,784 ನಾಗರಿಕರಿಗೆ ಪೌರತ್ವ ಕಾರ್ಡ್‌ಗಳನ್ನು ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಂಬಂಧ ಅಧಿಕಾರಿಗಳಿಗೆ, ಸಿಬ್ಬಂದಿಗೆ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಈ ಮಾಹಿತಿ ನೀಡಲಾಯಿತು.

ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಕುಮಾರ್ ಮಾತನಾಡಿ, ಭಾರತೀಯ ಪೌರತ್ವ ಕಾಯ್ದೆಯನ್ವಯ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕರಿಗೂ ಪೌರತ್ವ ಕಾರ್ಡ್ ನೀಡಲಾಗುತ್ತದೆ. ಈಗಾಗಲೇ 1ನೆ ಹಂತದಲ್ಲಿ ಮನೆ-ಮನೆಗೆ ತೆರಳಿ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ನಂತರ ಇವುಗಳ ಪರಿಶೀಲನೆ ನಡೆಸಿ, ಆಧಾರ್, ಪಡಿತರ ಚೀಟಿಗಳ ಮಾಹಿತಿ ಪಡೆದು ಡಾಟಾ ನಮೂದಿಸಲಾಗಿದೆ. ಇದೀಗ ಇವುಗಳ ಪರಿಷ್ಕರಣೆಗೊಳಿಸಿ, ನಿಖರ ಮಾಹಿತಿ ನಮೂದಿಸಲಾಗುತ್ತಿದೆ. ಬಳಿಕ ನೋಂದಣಿ ಸಿದ್ಧಗೊಳಿಸಿ, ಅಂತಿಮವಾಗಿ ಪೌರತ್ವ ಕಾರ್ಡ್‌ಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಡಾಟಾ ನಮೂದಿಸುವ ಸಿಬ್ಬಂದಿ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದು ಸೂಚಿಸಿದ ಅವರು, ತ್ವರಿತವಾಗಿ ಈ ಯೋಜನೆಯನ್ನು ಜಿಲ್ಲೆಯಲ್ಲಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News