ಡಾ.ಕಾರಂತ ಬಾಲವನದ ಅಭಿವೃದ್ಧಿಗೆ ಒಂದು ಕೋ.ರೂ. ಬಿಡುಗಡೆ: ಡಿಸಿ

Update: 2016-06-24 18:31 GMT

ಮಂಗಳೂರು, ಜೂ.24: ಪುತ್ತೂರಿನ ಡಾ. ಶಿವರಾಮ ಕಾರಂತ ಬಾಲವನದ ಸಮಗ್ರ ಅಭಿವೃದ್ಧಿಗೆ ಸರಕಾರದಿಂದ 1 ಕೋ.ರೂ. ಬಿಡುಗಡೆ ಯಾಗಿದೆ. ಇದರ ಕಾಮಗಾರಿಗೆ ಪ್ರತ್ಯೇಕ ಸಮಿತಿ ಯನ್ನು ರಚಿಸಲಾಗಿದ್ದು, ಶೀಘ್ರವೇ ರೂಪುರೇಷೆ ಸಿದ್ಧಪಡಿಸಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಈ ಮೊತ್ತ ಬಿಡುಗಡೆಯಾಗಿದ್ದು, ಇದಲ್ಲದೆ ಬಾಲವನದಲ್ಲಿರುವ ಕಾರಂತರ ಮನೆಯ ದುರಸ್ತಿಗೆ 29 ಲಕ್ಷ ರೂ. ಬಿಡುಗಡೆಯಾಗಿದೆ ಎಂದರು.
ಕಾರಂತರ ಮನೆಯ ಮೂಲರೂಪಕ್ಕೆ ಧಕ್ಕೆಯಾಗದಂತೆ ದುರಸ್ತಿ ಕಾಮಗಾರಿಯನ್ನು ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಒಂದು ಕೋಟಿ ರೂ. ಮೊತ್ತದಲ್ಲಿ ಯಾವ ಕಾಮಗಾರಿಯನ್ನು ಹಮ್ಮಿಕೊಳ್ಳಬೇಕು ಎಂಬ ಬಗ್ಗೆ ಸಮಿತಿಯೊಂದನ್ನು ರಚಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಅಧ್ಯಕ್ಷತೆಯ ಈ ಸಮಿತಿಯಲ್ಲಿ ಕಾರಂತರ ಮಕ್ಕಳಾದ ಉಲ್ಲಾಸ್ ಕಾರಂತ, ಕ್ಷಮಾ ರಾವ್ ಹಾಗೂ ವಿವೇಕ ರೈಯವರಿದ್ದು, ಈ ಸಮಿತಿಯು ಶೀಘ್ರವೇ ಸಭೆ ನಡೆಸಿ ಕಾಮಗಾರಿಯ ಮುಂದಿನ ಸ್ವರೂಪವನ್ನು ನಿರ್ಧರಿಸಲಿದೆ ಎಂದರು.
 ಸಭೆಯಲ್ಲಿ ಕಾರಂತರ ಪುತ್ರಿ ಕ್ಷಮಾ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News