ಕಡಬ: ಸೈಂಟ್ ಜೋಕಿಮ್ಸ್ ಚರ್ಚ್ ವಿವಾದ

Update: 2016-06-24 18:37 GMT

ಕಡಬ, ಜೂ. 24: ಸೈಂಟ್ ಜೋಕಿಮ್ಸ್ ಚರ್ಚಿನ ಯಾವುದೇ ಕಾರ್ಯ ಚಟುವಟಿಕೆಯ, ಯೋಜನೆಯ ಹಾಗೂ ಹಣದ ವ್ಯವಹಾರದಲ್ಲಿ ಆಡಳಿತ ಸಮಿತಿಯ ನಿರ್ಣಯ ಅನುಮೋದನೆಗೊಳ್ಳದೆ ಕೇವಲ ಧರ್ಮಗುರುಗಳ ಕೈಗೊಂಬೆಯಾದ ಸೈಮನ್ ಲೂವಿಸರನ್ನು ಮಾತ್ರ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುವುದು ವಿಷಾದನೀಯ. ಇಷ್ಟೆಲ್ಲಾ ಘಟನೆಗಳು ನಡೆದಿದ್ದರೂ ಇವ್ಯಾವುದರ ಬಗ್ಗೆ ಪ್ರತಿಕ್ರಿಯೆ ನೀಡದ ಫಾಣ ಲೋಬೊರವರು, ಅವರ ಕೈಗೊಂಬೆಯಾದ ಸೈಮನ್ ಲೂವಿಸ್ ರವರ ಮೂಲಕ ಅಸಮರ್ಪಕ, ಸುಳ್ಳು ಹೇಳಿಕೆ ನೀಡಿರುವುದು ಖಂಡನೀಯ ಎಂದು ಸೈಂಟ್ ಜೋಕಿಮ್ಸ್ ಚರ್ಚ್ ಪಾಲನ ಮಂಡಳಿಯ ಉಪಾದ್ಯಕ್ಷ ಬೆಂಜಮಿನ್ ಡಿ ಸೋಜ ಹಾಗೂ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಶ್ಯಾಮ್ ತೋಮಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡೇನಿಸ್ ಫೆರ್ನಾಂಡಿಸರು ಪ್ರಸ್ತುತ ಆಡಳಿತ ಸಮಿತಿಯ ಹಾಗೂ ಆರ್ಥಿಕ ಸಮಿತಿಯ ಸದಸ್ಯನಾಗಿರುವುದಿಲ್ಲ. ಕೇವಲ ಸಾಮಾನ್ಯ ಸದಸ್ಯನಾಗಿರುತ್ತಾರೆ. ಹಾಗಿರುವಾಗ ಧರ್ಮಗುರುಗಳು ಅತ್ಮಿಯತೆಯಿಂದ ಕರೆದಾಗ ಅತ್ಮಿಯತೆಯಿಂದ ತೆರಳಿರುತ್ತಾರೆ ಹೊರತು ಯಾವುದೇ ಗುತ್ತಿಗೆ ಕಾಮಗಾರಿಯನ್ನು ಪಡೆದುಕೊಳ್ಳಲು ತೆರಳಿರುವುದಿಲ್ಲ. ಸೈಮನ್ ಲೂವಿಸ್ ಹೇಳಿದ ಹಾಗೆ ಕಾಮಗಾರಿ ಗುತ್ತಿಗೆಯನ್ನು ಗುತ್ತಿಗೆ ಪಡೆಯಲು ಅವರು ಗುತ್ತಿಗೆದಾರನೂ ಅಲ್ಲ. ಕಳೆದ ಕೆಲವು ವರ್ಷಗಳ ಹಿಂದೆ ಚರ್ಚಿನ ಹಣದ ವ್ಯವಹಾರದಲ್ಲಿ ಭಾರೀ ಅವ್ಯವಹಾರ ನಡೆಸಿ,ಸುಮಾರು ಮೂರು ನಾಲ್ಕು ವರ್ಷಗಳ ಕಾಲ ಚರ್ಚ್‌ನಿಂದಲೇ ಕಣ್ಮರೆಯಾಗಿ, ಮೊದಲಿನ ಧರ್ಮಗುರುಗಳಲ್ಲಿ ವೈಮನಸ್ಸಿನಿಂದ ಹತ್ತಿರದ ಪಂಜ ಚರ್ಚಿಗೆ ಪೂಜೆಗಾಗಿ ಕದ್ದು ಮುಚ್ಚಿ ಅಪರೂಪಕ್ಕೆ ಹೋಗುತ್ತಿದ್ದ, ಸೈಮನ್ ಲೂವಿಸ್ ರೊಡ್ರಿಗಸ್ಗೆ ಪಂಚಾಯತ್ ಆಭಿವೃಧ್ದಿ ಅಧಿಕಾರಿಯಾಗಿರುವಾಗ ಗೋಲ್ಮಾಲ್ ಕಾಮಗಾರಿಯ ಬಗ್ಗೆ ಅನುಭವವಿರುವುದರಿಂದ ಈಗ ಮತ್ತೆ ಚರ್ಚ್ ವ್ಯವಹಾರಕ್ಕೆ ಮೀಸೆ ತೂರಿಸಿ ಆಧಿಕಾರ ಚಲಾಯಿಸಲು ಹವಣಿಸುತ್ತಿದ್ದಾರೆ. ಇಷ್ಟೆಲ್ಲ ವಿಚಾರಗಳು ತಿಳಿದಿದ್ದರೂ ಸಹ ಕಳೆದ 13 ವರ್ಷಗಳಿಂದ ಚರ್ಚಿನಲ್ಲಿ ಲೆಕ್ಕ ಪತ್ರಗಳನ್ನು ಆಡಿಟ್ ಮಾಡಿಲ್ಲ ಎನ್ನುವಂತಹ ಸೈಮನ್ ಲೂವಿಸ್ರ ಹೇಳಿಕೆ ಹಾಸ್ಯಸ್ಪದವೇ ಸರಿ ಎಂದರು.

ಶ್ಯಾಮ್ ತೋಮಸ್ ಎಂಬವರು ಕೊಂಕಣಿ ಕ್ರೆಸ್ತರೇ ಅಲ್ಲ. ಆದುದರಿಂದ ಅವರು ಈ ಚರ್ಚಿನ ಸದಸ್ಯರೇ ಅಲ್ಲ ಎನ್ನುವ ಸೈಮಾನ್ ಲೂವಿಸ್ ರವರ ಹೇಳಿಕೆ ತೀರಾ ಅತಿರೇಕದ್ದಾಗಿದೆ. ರೋಮನ್ ಕಾಥೋಲಿಕ್ ಚರ್ಚ್‌ಗಳಲ್ಲಿ ಕನ್ನಡ, ಮಲಯಾಳಂ, ತೆಲುಗು, ಕೊಂಕಣಿ ಎನ್ನುವ ಭೇದ ಭಾವವಿರುವುದಿಲ್ಲ. ರೋಮನ್ ಕೆಥೋಲಿಕ್ ಆಗಿರುವ ಯಾವೊಬ್ಬ ಭಾಷಿಕನೂ ಕಥೋಲಿಕ್ ಚರ್ಚುಗಳಲ್ಲಿ ಸದಸ್ಯತ್ವ ಪಡೆಯಲು ಆರ್ಹನಾಗಿರುತ್ತಾನೆ. ಹಾಗಿರುವಾಗ ನಮ್ಮ ಸೈಂಟ್ ಜೋಕಿಮ್ಸ್ಚರ್ಚಿನಲ್ಲಿ ತಮಿಳು ಮಲಯಾಳಿ, ಕನ್ನಡ ಕ್ರೆಸ್ತರು ಸದಸ್ಯರಾಗಿರುವುದು ಸೈಮನ್ ಲೂವಿಸ್ರಿಗೆ ಓರ್ವ ಸಲಹಾ ಮಂಡಳಿಯ ಕಾರ್ಯದರ್ಶಿಯಾಗಿ ತಿಳಿದಿಲ್ಲವೇ?. ಅವರು ಸುಮಾರು 40 ವರ್ಷಗಳಿಂದಲೇ ಸೈಂಟ್ ಜೋಕಿಮ್ಸ್ ಚರ್ಚಿನಲ್ಲಿ ಸದಸ್ಯರಾಗಿದ್ದಾರೆ. ಇದಕ್ಕೆ ಅಲ್ಲಿ ಇರುವ ದಾಖಲಾತಿಗಳೇ ಸಾಕ್ಷಿ. ಕಡಬ ಪರಿಸರದ ಮಲಯಾಳಿ ಮತ್ತು ಕೊಂಕಣಿ ಇತರ ಕಾಥೋಲಿಕ್ ಕ್ರೆಸ್ತರ ಸುಮಧುರ ಭಾಂದವ್ಯಕ್ಕೆ ಹುಳಿ ಹಿಂಡುವ ಹುನ್ನಾರವನ್ನು ಸೈಮನ್ ಲೂವಿಸ್ ರವರ ಮುಖಾಂತರ ಫಾಣ ಲೋಬೊರವರು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕಳೆದ ಕೆಲವು ವರ್ಷಗಳಿಂದ ಸೈಂಟ್ ಜೋಕಿಮ್ಸ್ಚರ್ಚ್ ಆಡಳಿತಕ್ಕೊಳಪಡದ ಆದರೆ ಚರ್ಚಿಗೆ ಸಂಬಂಧ ಪಟ್ಟ ಸಮಾನ ಮನಸ್ಕ ಸದಸ್ಯರನ್ನು ಒಳಗೊಂಡ ನಮ್ಮ ಹಿತ ರಕ್ಷಣಾ ಸಮಿತಿಯು ಉತ್ತಮ ಸಂಘಟನೆಯಾಗಿ ಮೂಡಿ ಬರುತ್ತಿರುವುದು ಫಾಣ ಲೋಬೋ ಮತ್ತು ಸೈಮನ್ ಲೂವಿಸ್ ರವರಿಗೆ ನುಂಗಲಾರದ ತುತ್ತಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಬೇಡಿಕೆಗೆ ಸೂಕ್ತ ಸ್ಪಂದನೆ ಸಿಗದಿದ್ದಲ್ಲಿ ಉಗ್ರ ಹೋರಾಟವನ್ನು ಮಾಡುತ್ತೆವೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News