×
Ad

ಪಂಜಾಬ್ ನ ಫಿರೋಜ್ಹ್‌ಪುರದಲ್ಲಿ ಭಾರತ-ಪಾಕ್ ಯೋಧರ ನಡುವೆ ಒಂದು ಡಿಫರೆಂಟ್ ಯುದ್ಧ? ನೋಡಿ!

Update: 2016-06-25 00:07 IST

ಸಾಮಾನ್ಯವಾಗಿ ಪ್ರತೀ ದಿನ ಸೂರ್ಯಾಸ್ತದ ಬಳಿಕ ಭಾರತ ಮತ್ತು ಪಾಕಿಸ್ತಾನದ ವಿವಿಧ ಗಡಿಭಾಗದ ಔಟ್‌ಪೋಸ್ಟ್‌ಗಳಲ್ಲಿ ನೀರಸವಾಗಿ ನಡೆಯುವ ಒಂದು ಪರಂಪರೆ ಬುಧವಾರ ಕುತೂಹಲಕರ ತಿರುವು ಪಡೆದಿದೆ. ಈ ಗಡಿಭಾಗದಲ್ಲಿ ನಡೆಯುವ ಧ್ವಜವಂದನೆಯ ಸಂದರ್ಭವು ಎರಡೂ ಕಡೆಯ ಸೈನಿಕರು ಧ್ವೇಷ ಕಾರಿಕೊಳ್ಳುವ ಮಟ್ಟಿಗೆ ಹೋಗಿದೆ. ಬೀಟಿಂಗ್ ದ ರಿಟ್ರೀಟ್ ಸಮಾರಂಭವು ಗಡಿಭಾಗದ ನಿತ್ಯದ ವಿಧಿಯಾಗಿದೆ. ಇದು ಭಾರತ ಮತ್ತು ಪಾಕಿಸ್ತಾನ ನಡುವಿನ ಶತ್ರುತ್ವದ ಪ್ರತೀಕ. ಎರಡೂ ದೇಶದ ಧ್ವಜಗಳನ್ನು ಸೇನಾ ಶೈಲಿಯಲ್ಲಿ ಪರಿಪೂರ್ಣವಾಗಿ ಕೆಳಗಿಳಿಸಲಾಗುತ್ತದೆ. ಎರಡೂ ಬದಿಯ ಸೈನಿಕರು ತಮ್ಮ ಕಣ್ಣುಗಳಲ್ಲಿ ಉಗ್ರತೆ ಪ್ರದರ್ಶಿಸಿ ಚಲನೆ ಮತ್ತು ನಡವಳಿಕೆಯಲ್ಲಿ ಅದನ್ನು ತೋರಿಸುತ್ತಾರೆ. ಆದರೆ ಪಂಜಾಬಿನ ಫಿರೋಜ್ಪುರ ನಗರದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಎರಡೂ ಕಡೆಯ ಅಧಿಕಾರಿಗಳು ಮತ್ತು ಪ್ರವಾಸಿಗರ ಮುಂದೆ ಧ್ವಜವಂದನೆ ನಡೆಯುತ್ತಿದ್ದಾಗ ಭಾರತೀಯ ಸೈನಿಕನ ಮೊಣಕೈಗೆ ಪಾಕಿಸ್ತಾನದ ಸೈನಿಕ ಸ್ಪರ್ಶಿಸಿದ್ದಾನೆ. ಇಬ್ಬರೂ ಧ್ವಜವನ್ನು ಕೊಂಡೊಯ್ಯುತ್ತಿದ್ದಾಗ ಇದು ನಡೆದಿದೆ.

ಈ ಸಣ್ಣ ದೈಹಿಕ ಸ್ಪರ್ಶವು ಇತರ ಯಾವುದೇ ಸಂದರ್ಭದಲ್ಲಿ ಹೆಚ್ಚು ವಿಶೇಷ ಎನಿಸುತ್ತಿರಲಿಲ್ಲ. ಆದರೆ ಭಾರತೀಯ ಸೈನಿಕನಿಗೆ ಇದು ಸಹಿಸದಾಗದೆ ಆತ ರೋಷದಿಂದ ಬೈಯಲಾರಂಭಿಸಿದ ಮತ್ತು ಪಾಕಿಸ್ತಾನದ ರೇಂಜರಿಗೆ ಹೊಡೆಯಲು ಹೋದ. ಆಕಸ್ಮಿಕವಾಗಿ ಬದಲಾದ ಪರಿಸ್ಥಿತಿ ಎಲ್ಲರಿಗೂ ಆಘಾತ ತಂದಿತ್ತು. ಎರಡೂ ಕಡೆಯ ಸೈನಿಕರು ಮತ್ತು ಅಧಿಕಾರಿಗಳು ಧ್ವಜವಂದನೆ ನೀಡುತ್ತಿದ್ದ ಸೈನಿಕರ ಬಳಿಕ ಓಡಿ ಬಂದು ಅವರನ್ನು ಸ್ಥಳದಿಂದ ದೂರ ಕೊಂಡೊಯ್ದರು. ಈವರೆಗೆ ಸರ್ಕಾರದಿಂದ ಈ ಪ್ರಕರಣಕ್ಕೆ ಸಂಬಂಧಿಸಿ ಅಧಿಕೃತ ವಿವರಣೆ ಈವರೆಗೆ ಬಂದಿಲ್ಲ. ನಾಗರಿಕ ಪ್ರವಾಸಿಗರು ಈ ಘಟನೆಯನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ದಾಖಲಿಸಿದ ಕಾರಣ ಈ ವೀಡಿಯೊ ಈಗ ವ್ಯಾಪಕವಾಗಿ ಪ್ರಸಾರ ಕಂಡಿದೆ.

Full View

ಕೃಪೆ:indiatoday.intoday.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News