×
Ad

ಕಾಸರಗೋಡು: ಪಿಲಿಕ್ಕೋಡು ಬ್ಯಾಂಕ್ ಮ್ಯಾನೇಜರ್ ಸ್ನೇಹಿತನ ಬಂಧನ

Update: 2016-06-25 10:36 IST

ಕಾಸರಗೋಡು, ಜೂ.25:  ಪಿಲಿಕ್ಕೋಡು  ಸೇವಾ ಸಹಕಾರಿ ಬ್ಯಾ೦ಕ್ ನಲ್ಲಿ ನಡೆದ  ನಕಲಿ ಚಿನ್ನಾಭರಣ ವಂಚನೆ  ಪ್ರಕರಣಕ್ಕೆ ಸಂಬಂಧಪಟ್ಟ೦ತೆ ಬ್ಯಾ೦ಕ್ ಮೆನೇಜರ್ ನ   ಸ್ನೇಹಿತನೋರ್ವನನ್ನು  ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು  ಕೊಡೋತ್  ಪಿಲಿಕ್ಕೋಡ್ ರೈಲ್ವೆ  ಮೇಲ್ಸೇತುವೆ ಸಮೀಪದ ಸಿ .ಸುಭಾಷ್( ೪೦) ಎಂದು ಗುರುತಿಸಲಾಗಿದೆ. 
ಈ  ನಡುವೆ  ನಕಲಿ ಚಿನ್ನಾಭರಣ ಅಡವಿಟ್ಟು  ೮೦.೪೮ ಲಕ್ಷ ರೂ. ಸಾಲ  ಪಡೆದು  ವಂಚನೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ   ಬಂಧಿತರಾದ  ಬ್ಯಾ೦ಕ್ ಮೆನೇಜರ್  ಎಂ . ವಿ  ಶರತ್ ಚಂದ್ರನ್ , ಅಪ್ರೈಸರ್  ಪಿ . ವಿ  ಕು೦ಞರಾಮನ್ ರನ್ನು  ಬ್ಯಾ೦ಕ್ ಗೆ  ತಲುಪಿಸಿ  ತನಿಖಾ ತಂಡ  ಮಾಹಿತಿ ಕಲೆಹಾಕಿತು.

ಕಾಞ೦ಗಾಡ್ ನ   ಜುವೆಲ್ಲರಿಯೊಂದರಿಂದ  ಖರೀದಿಸಿದ್ದಾಗಿ ಬಂಧಿತ ಸುಭಾಷ್ ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.ಪಿಲಿಕ್ಕೋಡು ಬ್ಯಾ೦ಕ್ ನಲ್ಲಿ ನಡೆದ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತರಾದವರ ಸಂಖ್ಯೆ  ಮೂರಕ್ಕೇರಿದೆ. ಸುಭಾಷ್ ಐದು ಬಾರಿ ಈತ ನಕಲಿ ಚಿನ್ನಾಭರಣ ಅಡವಿಟ್ಟು ಈ ವಂಚನೆ ನಡೆಸಿದ್ದನು. ಬ್ಯಾ೦ಕ್  ಮೆನೇಜರ್ ರ  ಅರಿವಿನಿಂದಲೇ ಈ ವಂಚನೆ ನಡೆಸಿದ್ದನು ಎಂದು ತನಿಖೆ ಯಿಂದ ತಿಳಿದುಬಂದಿದೆ. ಹಲವಾರು ಮಂದಿ ಈ ವಂಚನೆ ಯಲ್ಲಿ  ಶಾಮೀಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.  ಜಿಲ್ಲೆಯ  ಹಲವು ಸಹಕಾರಿ ಬ್ಯಾ೦ಕ್ ಗಳಲ್ಲಿ ವಂಚೆನೆ ನಡೆದಿದ್ದು, ಬೆಳಕಿಗೆ ಬಂದ ನಾಲ್ಕು  ಬ್ಯಾ೦ಕ್ ಗಳ  ವಂಚನೆ ಪ್ರಕರಣಗಳಲ್ಲಿ ಬಂಧಿತರಾದವರ ಸಂಖ್ಯೆ ೯ ಕ್ಕೇರಿದೆ. ಸುಮಾರು ಎಂಟು ಲಕ್ಷ  ರೂ. ಗಳ ವಂಚನೆ ನಡೆದಿದೆ ಎಂದು ಅಂದಾಜಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News