ಕುವೈಟ್ ಸೆಂಟ್ರಲ್‌ಜೈಲ್‌ನಲ್ಲಿ ಬೆಂಕಿ ಅನಾಹುತ: ಒಬ್ಬ ಮೃತ್ಯು, 47 ಮಂದಿಗೆ ಗಾಯ
ಕುವೈಟ್ ಸಿಟಿ, ಜೂನ್ 25: ಕುವೈಟ್‌ನ ಸೆಂಟ್ರಲ್ ಜೈಲ್‌ನಲ್ಲಿ ಸಂಭವಿಸಿದ ಅಗ್ನಿ ಅನಾಹುತದಿಂದಾಗಿ ಒಬ್ಬರು ಮೃತರಾಗಿದ್ದು 47 ಮಂದಿ ಗಾಯಗೊಂಡಿದ್ದಾರೆಂದು ವರದಿಯಾಗಿದೆ. ಅಧಿಕೃತ ಸುದ್ದಿ ಸಂಸ್ಥೆಯಾದ ಕುವೈಟ್ ನ್ಯೂಸ್ ಏಜೆನ್ಸಿ ಗೃಹಸಚಿವಾಲಯ, ಅಗ್ನಿಶಾಮಕ ದಳ ಅಧಿಕಾರಿಗಳನ್ನು ಉದ್ಧರಿಸಿ ವರದಿಮಾಡಿದೆ. ಗಂಭೀರವಾಗಿ ಗಾಯಗೊಂಡವರನ್ನು ಸಬಾಹ್ ಆಸ್ಪತ್ರೆಗೆ ಸೇರಿಸಲಾಗಿದೆ. ಸಿರಿಯಾದ ಕೈದಿಯೊಬ್ಬ ಮೃತನಾಗಿದ್ದಾನೆ ಎಂದು ಅದು ತಿಳಿಸಿದೆ.
ಗುರುವಾರ ಬೆಳಗ್ಗೆ ಝಲೈಬಿಯ ಸೆಂಟ್ರಲ್ ಜೈಲ್‌ನಲ್ಲಿ ಮಾದಕವಸ್ತು ಪ್ರಕರಣದ ಕೈದಿಗಳನ್ನು ಇರಿಸಿದ್ದ ನಾಲ್ಕನೆ ನಂಬ್ರ ಡೋರ್ಮೆಟ್ರಿಯಲ್ಲಿ ಬೆಂಕಿ ಹೊತ್ತಿಕೊಂಡು ವ್ಯಾಪಿಸಿತ್ತು. ಗಾಯಗೊಂಡವರನ್ನು ಫರ್ವಾನಿಯ. ಸಬಾಹ್, ಜಹ್ರ ಆಸ್ಪತ್ರೆಗೆ ಸೇರಿಸಲಾಗಿದೆ.ಎ ಏರ್‌ಕಂಡಿಷನರ್‌ನಲ್ಲುಂಟಾದ ಶಾರ್ಟ್‌ಸರ್ಕ್ಯೂಟ್ ಬೆಂಕಿ ಹಿಡಿಯಲು ಕಾರಣವೆಂದು ಪ್ರಾಥಮಿಕ ತನಿಖೆಗಳು ವಿವರಿಸಿವೆ. ಜಲೀಬ್. ಸುಲೈಬಿಯ, ಶುಹದ. ಫರ್ವಾನಿ. ಇಂಖಾದ್.ಅಸ್ನಾದ್ ಮುಂತಾದ ವಿವಿಧ ಭಾಗಗಳಿಂದ ಬಂದ ಏರಫೋರ್ಸ್ ಯುನಿಟ್‌ಗಳು ಬೆಂಕಿ ನಂದಿಸಲು ಮತ್ತು ಸುರಕ್ಷಾ ಕಾರ್ಯಗಳಲ್ಲಿ ಪಾಲ್ಗೊಂಡಿದ್ದವು.