ಟೆಂಪೋ ಟ್ರಾವಲ್ಲರ್ ನಲ್ಲಿ ಅಕ್ರಮ ದನ ಸಾಗಾಟ
Update: 2016-06-25 11:03 IST
ಮಂಗಳೂರು, ಜೂ.25: ನಗರದ ಕದ್ರಿ ಬಟ್ಟಗುಡ್ಡೆ ಯಲ್ಲಿ ಟೆಂಪೋ ಟ್ರಾವೆಲರ್‌ನಲ್ಲಿ ಅಕ್ರಮವಾಗಿ ದನ ಸಾಗಾಟವನ್ನು ಪತ್ತೆ ಹಚ್ಚಿದ ಕದ್ರಿ ಪೊಲೀಸರು ಒರ್ವನನ್ನು ಬಂಧಿಸಿದ್ದಾರೆ.ಟೆಂಪೋ ಟ್ರಾವೆಲರ್‌ನಲ್ಲಿ 18 ದನವನ್ನು ಸಾಗಾಟ ನಡೆಸಲಾಗುತ್ತಿತ್ತು. ಇದರಲ್ಲಿ ಒಂದು ದನ ಮೃತಪಟ್ಟಿದ್ದು ಉಳಿದ 17 ದನವನ್ನು ಕದ್ರಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.ಉಡುಪಿಯಿಂದ ಮಂಗಳೂರಿಗೆ ದನ ಸಾಗಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿಯ ಮೇರೆಗೆ ಕದ್ರಿ ಪೊಲೀಸ್ ಇನ್ಸ್‌ಪೆಕ್ಟರ್ ಮಾರುತಿ ನಾಯಕ್ ನೇತೃತ್ವದಲ್ಲಿ ಪೊಲೀಸರು ತಪಾಸಣೆ ನಡೆಸಿ ಅಕ್ರಮ ದನ ಸಾಗಾಟವನ್ನು ಪತ್ತೆಹಚ್ಚಿದ್ದಾರೆ. ಟೆಂಪೋದಲ್ಲಿದ್ದ ಮೂವರು ಪರಾರಿಯಾಗಿದ್ದಾರೆ.ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.