ಅಮೆಮಾರಿನಲ್ಲಿ ಮನೆ ಕುಸಿದು ಬೀಳುವ ಭೀತಿ
Update: 2016-06-25 14:12 IST
ಫರಂಗಿಪೇಟೆ, ಜೂ.25: ಧಾರಾಕಾರ ಸುರಿದ ಮಳೆಯಿಂದಾಗಿ ಪುದು ಗ್ರಾಮದ ಅಮೆಮಾರಿನಲ್ಲಿ ಉಞೋನು ಎಂಬವರ ಮನೆಯ ಹಿಂಬದಿಯ ಆವರಣ ಗೋಡೆ ಕುಸಿದು ಬಿದ್ದಿದೆ. ರಸ್ತೆಯ 10 ಫೀಟ್ ಎತ್ತರದಲ್ಲಿ ಉಞೋನು ಎಂಬವರ ಮನೆ ಇದ್ದು, ಗೋಡೆ ಕುಸಿದ ಪರಿಣಾಮದಿಂದ ಮನೆ ಕುಸಿದು ಬೀಳುವ ಸ್ಥಿತಿಯಲ್ಲಿದ್ದು, ಉಞೋನು ಮತ್ತು ಕುಟುಂಬ ಆತಂಕದಲ್ಲಿ ವಾಸಿಸುತ್ತಿದ್ದಾರೆ.
ಸ್ಥಳಕ್ಕೆ ಪುದು ಗ್ರಾಮ ಪಂಚಾಯತ್ ಅಧ್ಯಕ್ಷೆ ಆತಿಕಾ, ಸದಸ್ಯ ಸುಲೈಮಾನ್ ಉಸ್ತಾದ್, ಗ್ರಾಮ ಲೆಕ್ಕಾಧಿಕಾರಿ ಪ್ರದೀಪ್, ಮತ್ತು ಸಿಬ್ಬಂದಿ ಅಬ್ದುಲ್ ಸಲಾಮ್ ಬಂದು ಪರಿಶೀಲಿಸಿ ತಹಶೀಲ್ಧಾರರಿಗೆ ವರದಿ ಕಳುಹಿಸುವ ಭರವಸೆ ನೀಡಿದರು.