×
Ad

ಆಸ್ಟ್ರೇಲಿಯಾ ನೌಕಾಪಡೆಯಲ್ಲಿ ಅಮಾನುಷ ಲೈಂಗಿಕ ದೌರ್ಜನ್ಯ ಬಹಿರಂಗ

Update: 2016-06-25 15:38 IST

ಸಿಡ್ನಿ: ತರಬೇತಿ ಸಮಯದಲ್ಲಿ ತಮಗೆ ಹಲವಾರು ವಿಧದಲ್ಲಿ ಲೈಂಗಿಕ ಕಿರುಕುಳ ನೀಡಲಾಗಿತ್ತು ಹಾಗೂ ಪರಸ್ಪರರ ಮೇಲೆ ಅತ್ಯಾಚಾರ ಮಾಡಲು ಒತ್ತಡ ಹೇರಲಾಗಿತ್ತೆಂದು ಆಸ್ಟ್ರೇಲಿಯಾದ ನೌಕಾಪಡೆಯ ಕೆಲವು ಕೆಡೆಟ್ ಗಳು  ರಾಯಲ್ ಕಮಿಷನ್ ಎದುರು ದೂರಿದ್ದು ಆಸ್ಟ್ರೇಲಿಯಾ ನೌಕಾಪಡೆಯಲ್ಲಿ ನಡೆಯುತ್ತಿರುವ ಅಮಾನುಷ ಲೈಂಗಿಕ ದೌರ್ಜನ್ಯವನ್ನು ಈ ಮೂಲಕ ಬಹಿರಂಗಪಡಿಸಿದ್ದಾರೆ.

ಹಲವಾರು ಬಾರಿ ಇನ್ನೊಬ್ಬರ ಜನನಾಂಗಕ್ಕೆ ನೈಲ್ ಪಾಲಿಶ್ ಹಚ್ಚುವಂತೆ  ಹಾಗೂ ತಲೆಗಳನ್ನು ಟಾಯ್ಲೆಟ್ ನೊಳಗೆ ತುರುಕಿಸಿ ಫ್ಲಶ್ ಮಾಡುವಂತೆ ಒತ್ತಾಯಿಸಲಾಗುತ್ತಿತ್ತೆಂದೂ ಅವರು ಅಲವತ್ತುಕೊಂಡಿದ್ದಾರೆ.

ಇಂತಹ ಕ್ರಮಗಳನ್ನು `ರೈಟ್ ಆಫ್ ಪ್ಯಾಸೇಜ್' ಎಂದು ಬಣ್ಣಿಸಲಾಗುತ್ತಿತ್ತಲ್ಲದೆ ಅವರನ್ನು ನಿಜಾರ್ಥದಲ್ಲಿ ಪುರುಷರನ್ನಾಗಿಸುವ ಉದ್ದೇಶ ಅದರ ಹಿಂದಿವಿತ್ತು ಎನ್ನಲಾಗಿದೆ.

``ನನ್ನನ್ನು ರಾತ್ರಿ ವೇಳೆ ಹಾಸಿಗೆಯಿಂದ ಹೊತ್ತೊಯ್ದು ಹಲವಾರು ಬಾರಿ ಲೈಂಗಿಕವಾಗಿ ಶೋಷಿಸಲಾಯಿತಲ್ಲದೆ ಇನ್ನೊಬ್ಬ ಅಭ್ಯರ್ಥಿಯ ಜನನಾಂಗವನ್ನು ಅಥವಾ ಗುದದ್ವಾರವನ್ನು ನೆಕ್ಕಲು ಬಲವಂತಪಡಿಸಲಾಗಿತ್ತು,'' ಎಂದು ಇನ್ನೊಬ್ಬ ಕೆಡೆಟ್ ಹೇಳಿಕೊಂಡಿದ್ದಾನೆ.

``ಇನ್ನೂ ಹಲವಾರು ಬಾರಿ ತರಬೇತಿ ಹೊಂದುತ್ತಿರುವ ಕಿರಿಯ ಕೆಡೆಟ್ ಗಳೊಂದಿಗೆ ಗುದ ಸೆಕ್ಸ್ ಹೊಂದುವಂತೆ ಒತ್ತಡ ಹೇರಲಾಗಿತ್ತು ಹಾಗೂ ಒಮ್ಮೆ ಇನ್ನೊಬ್ಬ ಕಿರಿಯ ಅಭ್ಯರ್ಥಿ ನನ್ನನ್ನು ಅತ್ಯಾಚಾರ ಮಾಡಿದ್ದ,'' ಎಂದು ಆತ ಬಹಿರಂಗಗೊಳಿಸಿದ್ದಾನೆ.

ತರಬೇತಿ ಪಡೆಯುತ್ತಿದ್ದ 15 ವರ್ಷದ ಇಲೇನೋರ್ ಟಿಬ್ಬಲ್ ಎಂಬ ಹುಡುಗಿ ತನ್ನ 20 ವರ್ಷದ ತರಬೇತುದಾರನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಕ್ಕಾಗಿ ಆಕೆಯ ತರಬೇತಿಯನ್ನು ಮೊಟಕುಗೊಳಿಸುವುದಾಗಿ ಬೆದರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣವನ್ನೂ ರಾಯಲ್ ಕಮಿಷನ್ ವಿಚಾರಣೆ ನಡೆಸಿತ್ತು.

ಆಸ್ಟ್ರೇಲಿಯನ್ ಡಿಫೆನ್ಸ್ ಫೋರ್ಸ್ ನಲ್ಲಿ ಲೈಂಗಿಕ, ದೈಹಿಕ ಹಾಗೂ ಮಾನಸಿಕ ಕಿರುಕುಳ ಸಂಬಂಧ ಇಲ್ಲಿಯ ತನಕ ರಾಯಲ್ ಕಮಿಷನ್ 111 ಜನರ ಅಹವಾಲನ್ನು ದಾಖಲಿಸಿಕೊಂಡಿದೆ.  ರಕ್ಷಣಾ ಪಡೆಯ ವಿಚಾರದಲ್ಲಿ ಸಾವಿರಾರು ದೂರುಗಳು ದಾಖಲಾದ ನಂತರ ಈ ಕಮಿಷನ್ 2012 ರಲ್ಲಿ ಆರಂಭವಾಗಿತ್ತು.

ಶಾಲೆಗಳಲ್ಲಿ, ಅನಾಥಾಲಯಗಳಲ್ಲಿ, ಕ್ರೀಡಾ ಅಕಾಡೆಮಿಗಳಲ್ಲಿ  ಕಿರುಕುಳ ಪ್ರಕರಣಗಳನ್ನೂ ಈ ಕಮಿಷನ್ ತನಿಖೆ ನಡೆಸುತ್ತಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News