ವಿಠಲ ಪದವಿ ಪೂರ್ವ ಕಾಲೇಜು : ವಿಜ್ಞಾನ ಪುಸ್ತಕ ಪ್ರದರ್ಶನ
ವಿಟ್ಲ: ಗ್ರಂಥಗಳಿಂದ ವಿದ್ಯೆಗೆ ಶಕ್ತಿ ದೊರೆಯುತ್ತದೆ. ಪುಸ್ತಕಗಳಿರುವುದು ವಿದ್ಯಾವಂತರ ಉಪಯೋಗಕ್ಕಾಗಿ ಎಂದು ವಿಠಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ರಾಮ ಕೆ. ಹೇಳಿದರು.
ವಿಠಲ ಪದವಿ ಪೂರ್ವ ಕಾಲೇಜಿನ ಗ್ರಂಥಾಲಯದಲ್ಲಿ ವಿಜ್ಞಾನ ಸಂಘ ಹಾಗೂ ಗ್ರಂಥಾಲಯ ಸಮಿತಿ ಇವರು ಜಂಟಿ ಆಶ್ರಯದಲ್ಲಿ ನಡೆದ ಪುಸ್ತಕ ಪ್ರದರ್ಶನ ಮಾಲಿಕೆಯಲ್ಲಿ ವಿಜ್ಞಾನ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಂದು ಪುಸ್ತಕವು ಒಂದಲ್ಲ ಒಂದು ರೀತಿಯಲ್ಲಿ ನಮಗೆ ನೆರವಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ದೊರೆಯುವ ಅನೇಕ ಗ್ರಂಥಗಳು, ದಿನ ಪತ್ರಿಕೆಗಳು, ಪುಸ್ತಕಗಳನ್ನು ಓದುವುದರ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಗ್ರಂಥಾಲಯವನ್ನು ಸದಾ ಬೆಳೆಸುತ್ತಾ ಅದರ ಬಳಕೆಯನ್ನೂ ಹೆಚ್ಚಿಸುತ್ತಾ ಹೋಗಬೇಕು ಎಂದರು.
ಗ್ರಂಥಪಾಲಕ ರಮೇಶ್ ಎಂ.ಎಸ್. ಮಾತನಾಡಿ, ಪುಸ್ತಕಪ್ರದರ್ಶನಗಳು ಗ್ರಂಥಾಲಯದಲ್ಲಿ ದೊರೆಯುವ ಎಲ್ಲಾ ಪುಸ್ತಕಗಳ ಮಾಹಿತಿಯನ್ನು ಒದಗಿಸುತ್ತವೆ ಎಂದರು. ಪ್ರಾಂಶುಪಾಲರಾದ ಎ.ಎಸ್. ಆದರ್ಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕರಾದ ಪಿ. ಗೋವಿಂದ ಭಟ್, ಯು.ಎಸ್. ವಿಶ್ವೇಶ್ವರ ಭಟ್, ರಘುವೀರ, ಸುಚೇತನ್ ಜೈನ್, ಪಿ. ಶಂಕರನಾರಯಣ ಭಟ್, ಪ್ರಕಾಶ್ ನಾಯಕ್, ರೂಪಶ್ರೀ ಡಿ., ಪ್ರಮೀಳಾ ಕೆ.ಆರ್., ಆಶಾ, ವಿನುತಾ, ವಿದ್ಯಾಥರ್ಿಗಳಾದ ಆಶಾ, ಚಂದನ, ಕಲ್ಪಿತಾ, ಮಹಮ್ಮದ್ ಜಾಬಿರ್, ನಾಕ್ಸನ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.