×
Ad

ವಾಮಂಜೂರು: ಸೈಂಟ್ ರೇಮಂಡ್ಸ್ ಕಾಲೇಜಿನ ವಿವಿಧ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ

Update: 2016-06-25 23:28 IST

ಮಂಗಳೂರು, ಜೂ.25: ವಾಮಂಜೂರಿನ ಸೈಂಟ್ ರೇಮಂಡ್ಸ್ ಪದವಿ ಪೂರ್ವಕಾಲೇಜಿನ 2016-17ನೆ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಘಟಕ, ವಿವಿಧ ಪಠ್ಯೇತರ ಚಟುವಟಿಕೆಗಳ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಕಾಲೇಜಿನಲ್ಲಿ ನಡೆಯಿತು.

ವಿದ್ಯಾರ್ಥಿ ಘಟಕವನ್ನು ಉದ್ಘಾಟಿಸಿದ ಮಂಗಳೂರು ಕಮಿಷನರ್ ಕಚೇರಿಯ ಹೆಡ್‌ಕಾನ್‌ಸ್ಟೇಬಲ್ ಧರ್ಮಪಾಲ್, ವಿದ್ಯಾರ್ಥಿಜೀವನದಲ್ಲಿ ನಾಯಕತ್ವಗುಣ ಪ್ರಮುಖವಾದದ್ದು ಮತ್ತು ಅದನ್ನು ಪಡೆದುಕೊಳ್ಳಲು ಸನ್ಮಾರ್ಗದಲ್ಲಿ ನಡೆಯಬೇಕು. ದುಶ್ಚಟಗಳ ದಾಸರಾಗದೆ ಆರೋಗ್ಯವಂತ ಸಮಾಜಕ್ಕಾಗಿ ನಾವು ಶ್ರಮಿಸಬೇಕು ಎಂದರು.

ರಾಷ್ಟ್ರೀಯ ಸೇವಾ ಯೋಜನಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಿಭಾಗದ ಉಪನ್ಯಾಸಕ ಪ್ರೊ. ಹರಿಪ್ರಸಾದ್ ಎನ್., ವಿದ್ಯಾರ್ಥಿಜೀವನದಲ್ಲಿ ಪಠ್ಯ ಪುಸ್ತಕಗಳಿಂದ ದೊರೆಯುವ ಶಿಕ್ಷಣ ಸಮಾಜದಲ್ಲಿ ಸ್ಥಾನಮಾನವನ್ನು ಒದಗಿಸಿದರೆ ಪಠ್ಯೇತರವಾಗಿ ದೊರೆಯುವ ಶಿಕ್ಷಣ ಜೀವದ ಮೌಲ್ಯವನ್ನು ತಿಳಿಸಿಕೊಡುತ್ತದೆ. ಅಂತಹ ಮೌಲ್ಯಧಾರಿತ ಶಿಕ್ಷಣಕ್ಕಾಗಿ ವಿದ್ಯಾಭ್ಯಾಸದ ಜೊತೆಗೆ ರಾಷ್ಟ್ರೀಯ ಸೇವಾ ಯೋಜನೆಯಂತಹ ಯೋಜನೆಗಳು ಮಹತ್ತರ ಪಾತ್ರ ವಹಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ನೇಚರ್‌ಕ್ಲಬ್, ಭಾಷಾಕ್ಲಬ್, ವಾಣಿಜ್ಯಕ್ಲಬ್, ವೈಎಸ್‌ಎಂ ಕ್ಲಬ್, ಕಲಾ ಕ್ಲಬ್ ಗಳನ್ನು ಉದ್ಘಾಟಿಸಲಾಯಿತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಲ್ಲಾ ಘಟಕದ ನಾಯಕ ನಾಯಕಿಯರಿಗೆ ಪ್ರತಿಜ್ಞಾವಿಧಿ ಭೋಧಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಭಗಿನಿ ಸಾಧನಾ, ವಿದ್ಯಾರ್ಥಿ ಜೀವನದಲ್ಲಿ ಬರುವ ಎಲ್ಲಾ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಎಲ್ಲಾ ಕಷ್ಟ-ನಷ್ಟಗಳನ್ನು ಮೆಟ್ಟಿ ನಿಂತು ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಬೇಕೆಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಘಟಕದ ನಾಯಕ ಧನುಷ್ ಎಸ್., ನಾಯಕಿ ದೀಪ್ತಿ ಎಲ್., ಕಾರ್ಯದರ್ಶಿಗಳಾದ ರಚನಾ, ಪ್ರಜ್ವಲ್, ಕ್ರೀಡಾ ಕಾರ್ಯದರ್ಶಿಗಳಾದ ರೋಹನ್, ತುಳಸಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಸುಶ್ಮಿತಾ, ಧನುಷ್, ಎನ್ನೆಸ್ಸೆಸ್ ಘಟಕ ನಾಯಕ ನಾಯಕಿಯರಾದ ಇಬ್ರಾಹೀಂ ಬಾದ್‌ಷಾ ಮತ್ತು ಬಿಂದ್ಯಾ, ಕಾರ್ಯದರ್ಶಿಗಳಾದ ಅರ್ಪಿತ್, ಪೂಜಾ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಆಕಾಶ್, ಭವ್ಯ ಹಾಗೂ ಕಾಲೇಜಿನ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.

ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ವಸೀಲಾ ಸ್ವಾತಿಸಿ, ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿ ಘಟಕದ ಕಾರ್ಯದರ್ಶಿ ರಚನಾ ವಂದಿಸಿ, ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಮಹೀಶಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News