ಇಂದಿನಿಂದ ಕೃಷಿ ಅಭಿಯಾನ
Update: 2016-06-25 23:45 IST
ಮಂಗಳೂರು, ಜೂ.25: ಬಂಟ್ವಾಳ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ವತಿಯಿಂದ ವಿಟ್ಲ ಹೋಬಳಿಯ ಮಾಣಿ ಗ್ರಾಪಂ ಆವರಣದಲ್ಲಿ ಜೂ.26ರಂದು ಬೆಳಗ್ಗೆ 10 ಗಂಟೆಗೆ ಶಾಸಕಿ ಶಕುಂತಳಾ ಶೆಟ್ಟಿ ಕೃಷಿ ಅಭಿಯಾನಕ್ಕೆ ಚಾಲನೆ ನೀಡುವರು.
ಜೂ.26ರಂದು ಮಾಣಿ, ಪೆರಾಜೆ, ಕೆದಿಲ, ಪೆರ್ನೆ, ಬಿಳಿಯೂರು, ಅನಂತಾಡಿ, ನೆಟ್ಲಮುಡ್ನೂರು, ಇಡ್ಕಿದು, ಕುಳ, ವಿಟ್ಲ ಮುಡ್ನೂರು ಹಾಗೂ ವಿಟ್ಲ. ಜೂ.27ರಂದು ವಿಟ್ಲ ಮುಡ್ನೂರು, ಕೊಳ್ನಾಡು, ಸಾತ್ತೂರು, ವೀರಕಂಬ, ಬೋಳಂತೂರು, ಕೇಪು, ಪುಣಚ, ಅಳಿಕೆ, ಕನ್ಯಾನ, ಕರೋಪಾಡಿ, ಪೆರುವಾಯಿ ಹಾಗೂ ಮಾಣಿಲ. ಜೂ. 28ರಂದು ವಿಟ್ಲದ ಲ್ಯಾಂಪ್ ಸೊಸೈಟಿಯಲ್ಲಿ ಬೆಳಗ್ಗೆ 10:30ಕ್ಕೆ ರೈತರೊಂದಿಗೆ ಸಂವಾದ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.