ಪ್ರೊ ಕಬಡ್ಡಿ : ಪುನೇರಿ , ಯು ಮುಂಬಾ ಗೆಲುವಿನೊಂದಿಗೆ ಶುಭಾರಂಭ

Update: 2016-06-26 04:52 GMT

ಮುಂಬೈ, ಜೂ.25: ಇಲ್ಲಿ ಇಂದು ಆರಂಭಗೊಂಡ ನಾಲ್ಕನೆ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಮೆಂಟ್‌ನ ಮೊದಲ ಪಂದ್ಯದಲ್ಲಿ ಪುನೇರಿ ಪಲ್ಟಾನ್ಸ್ ಮತ್ತು ಯು ಮುಂಬಾ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.
ಪುನೇರಿ ಪಲ್ಟಾನ್ ತಂಡ ತೆಲುಗು ಟೈಟಾನ್ಸ್ ವಿರುದ್ಧ 4 ಅಂಕಗಳ ಅಂತರದಲ್ಲಿ ಜಯ ಗಳಿಸಿತು. ಪುನೇರಿ 28 ಮತ್ತು ತೆಲುಗು ಟೈಟಾನ್ಸ್ ತಂಡ 24 ಅಂಕಗಳನ್ನು ಪಡೆದಿತ್ತು.
 ಇನ್ನೊಂದು ಪಂದ್ಯದಲ್ಲಿ ಯು ಮುಂಬಾ ತಂಡ ಜೈಪುರ್ ಪಿಂಕ್ ಪ್ಯಾಂಥರ್ಸ್‌ ವಿರುದ್ಧ ಕೇವಲ 2 ಅಂಕಗಳ ರೋಚಕ ಜಯ ದಾಖಲಿಸಿದೆ. ಯು ಮುಂಬಾ 36 ಮತ್ತು ಜೈಪುರ್ 34 ಪಾಯಿಂಟ್ ಗಳಿಸಿತ್ತು.
 ರವಿವಾರ ರಾತ್ರಿ ನಡೆಯಲಿರುವ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ -ಬೆಂಗಾಲ್ ವಾರಿಯರ್ಸ್‌ನ್ನು, ಇನ್ನೊಂದು ಪಂದ್ಯದಲ್ಲಿ ಪುನೇರಿ ಪಲ್ಟಾನ್ಸ್ ತಂಡ ಯು ಮುಂಬಾವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News