ಮದ್ರಸ ಪರೀಕ್ಷೆ : ಸಜಿಪ ರೇಂಜ್ ನಲ್ಲಿ ನಿಝಾಮುದ್ದೀನ್ ಕಾರಾಜೆ ಪ್ರಥಮ
Update: 2016-06-26 09:27 IST
ವಿಟ್ಲ: ಅಖಿಲ ಭಾರತ ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಕಳೆದ ಸಾಲಿನ ಮದ್ರಸ 7ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಸಜಿಪ ರೇಂಜ್ ವ್ಯಾಪ್ತಿಗೆ ಒಳಪಟ್ಟ ಸಜಿಪಮೂಡ ಗ್ರಾಮದ ಕಾರಾಜೆ ನೂರುಲ್ ಹುದಾ ಮದ್ರಸದ ವಿದ್ಯಾರ್ಥಿ ನಿಝಾಮುದ್ದೀನ್ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾನೆ. ಈತ ಸಜಿಪಮೂಡ ಗ್ರಾಮದ ಕಾರಾಜೆ ನಿವಾಸಿ ಅಬೂಬಕ್ಕರ್ ಸಿದ್ದೀಕ್-ಶಾಹಿದಾ ದಂಪತಿಯ ಪುತ್ರ.