ಅಮ್ಮ ಪೆಟ್ರೋಲ್ ತುಂಬಿಸುವಾಗ ಬೆಂಕಿ ಕೊಟ್ಟ ಏಳು ವರ್ಷದ ಪುಟ್ಟ ಪೋರ
ಮಲೇಶ್ಯ, ಜೂನ್ 26: ಪೆಟ್ರೋಲ್ ಬಂಕ್‌ನಲ್ಲಿ ಅಮ್ಮ ಕಾರಿಗೆ ಪೆಟ್ರೋಲ್ ತುಂಬಿಸುತ್ತಿದ್ದಾಗ ಅವರ ಏಳು ವರ್ಷದ ಮಗ ಲೈಟರ್ ಉರಿಸಿದ್ದರಿಂದ ಕಾರು ಅಗ್ನಿಗಾಹುತಿಯಾಗಿ ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಲೇಶ್ಯದ ನಗರ ಕ್ವಾಲಕ್ರಾಯಿಯಲ್ಲಿ ಸಂಭವಿಸಿದೆ. ಅಮ್ಮ ಮಗುವನ್ನು ರಕ್ಷಿಸಲು ಹೆಣಗುತ್ತಿದ್ದ ಭೀಕರ ಫೂಟೇಜ್‌ಗಳು ಹೊರಗೆ ಬಂದಿದೆ. ಕಾರು ಅಗ್ನಿಗಾಹುತಿಯಾದಾಗ ಅದರಿಂದ ಮಗುವನ್ನು ರಕ್ಷಿಸಲು ಆತಾಯಿ ಜೀವದ ಹಂಗು ತೊರೆದು ಪ್ರಯತ್ನಿಸಿದ್ದರು. ಮಸ್ತೂರ ಗಝಾಲಿ ಎಂಬವರು ಈ ವೀಡಿಯೋ ಫೂಟೇಜ್‌ನ್ನು ಫೇಸ್‌ಬುಕ್‌ಗೆ ಪೋಸ್ಟ್ ಮಾಡಿದ್ದಾರೆ. ಪೆಟ್ರೋಲ್ ತುಂಬಿಸುವಾಗ ಲೈಟರ್ ಉರಿಸಿದ್ದರಿಂದ ಒಂದು ಅಗ್ನಿಗೋಳ ಕಾರಿನಿಂದ ಹೊರಗೆ ಬರುವುದು ಕಾಣಿಸುತ್ತಿದೆ. ಮಗು ಸೈಫುದ್ದೀನ್ ಇಸ್ಮಾಯೀಲ್‌ನ ಅಮ್ಮ ಕಾರಿನ ಬಾಗಿಲು ತೆರೆದು ಮಗುವನ್ನು ಉರಿಯುತ್ತಿದ್ದ ಕಾರಿನಿಂದ ಎಳೆದು ಹೊರಗೆ ತರುವ ಪ್ರಯತ್ನ ನಡೆಸಿದಾಗ ಮಹಿಳೆಗೂ ಸುಟ್ಟಗಾಯಗಳಾಗಿವೆ.ಪೆಟ್ರೋಲ್ ಬಂಕ್‌ನ ನೌಕರ ಬೆಂಕಿ ನಂದಿಸಲು ಫಯರ್ ಎಕ್ಸಟಿಂಗ್ಯುಶನ್‌ಗಳನ್ನು ಹಿಡಿದು ಓಡುವುದನ್ನು ಕಾಣಬಹುದಾಗಿದೆ. ಈ ವೀಡಿಯೋವನ್ನುಎರಡು ಮಿಲಿಯನ್ ಮಂದಿ ನೋಡಿದ್ದಾರೆ. ಮಗುವಿಗೆ ಶರೀರದಲ್ಲಿ ಶೇ.15ರಷ್ಟು ಸುಟ್ಟ ಗಾಯಗಳಾಗಿವೆ. ಮಗುವಿನ ಮುಖ, ಕಾಲು ಶರೀರಭಾಗದಲ್ಲಿ ಗಂಭೀರ ಗಾಯಗಳಾಗಿರುವುದನ್ನು ಚಿತ್ರಗಳು ಸ್ಪಷ್ಟಪಡಿಸುತ್ತಿವೆ.