×
Ad

ಅಶೋಕನಗರದಲ್ಲಿ ಕಾಂಗ್ರೆಸ್ ವತಿಯಿಂದ ವೈದ್ಯಕೀಯ ಶಿಬಿರ

Update: 2016-06-26 13:49 IST

ಮಂಗಳೂರು, ಜೂ.25:ಮಂಗಳೂರು ನಗರ ಬ್ಲಾಕ್  ಕಾಂಗ್ರೆಸ್ ಸಮಿತಿ ಹಾಗೂ  25ನೇ ದೇರೆಬೈಲ್ ಪಶ್ಚಿಮ ವಾರ್ಡ್  ಕಾಂಗ್ರೆಸ್ ಸಮಿತಿಗಳ ಜಂಟಿ ಆಶ್ರಯದಲ್ಲಿ ಇಂದು  ಅಶೋಕನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಜರಗಿತು. 

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ  ಶಾಸಕ  ಜೆ.ಆರ್. ಲೋಬೋ ಅವರು ಬಡವರಿಗೆ, ದೀನದಲಿತರಿಗೆ ಸಹಾಯಮಾಡುವುದರ ಮೂಲಕ ಕಾಂಗ್ರೆಸ್  ಪಕ್ಷ ತನ್ನ ಧ್ಯೇಯೋದ್ದೇಶವನ್ನು ಮಾಡಿ ತೋರಿಸುತ್ತಿದೆ. ಈ ನಿಟ್ಟಿನಲ್ಲಿ ನಗರದ ದಕ್ಷಿಣ ಕ್ಷೇತ್ರದಲ್ಲಿ ತಿಂಗಳಿಗೊಮ್ಮೆ ಪ್ರತೀ ವಾರ್ಡ್ ನಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸುವಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಬಡವರಿಗೆ ಕಾಂಗ್ರೆಸ್ ಪಕ್ಷದ ಮೇಲೆ ಅಪಾರ ನಂಬಿಕೆ ಇದೆ. ಇಂತಹ ಜನಸ್ನೇಹಿ ಕಾರ್ಯಕ್ರಮದ ಮೂಲಕ ಜನರ ಪ್ರೀತಿಯನ್ನು ಗಳಿಸಬಹುದು. ರೋಗಕ್ಕೆ ಮದ್ದು ಮಾಡುವುದು ಮುಖ್ಯ.  ಅದೇ ರೀತಿ ರೋಗ ಬರುವುದನ್ನು ತಡೆಗಟ್ಟುವುದು ಅತೀ ಮುಖ್ಯ. ಆದ್ದರಿಂದ ಸಾರ್ವಜನಿಕರು ಇಂತಹ ಶಿಬಿರದಲ್ಲಿ ಪಾಲ್ಗೊಂಡು ಇದರ ಪ್ರಯೋಜನವನ್ನು ಪಡೆಯಬೇಕೆಂದು ಹೇಳಿದರು.

ಶಿಬಿರದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ರಕ್ತದಾನ ನಡೆಯಿತು. ಉಚಿತ ದಂತ ಚಿಕಿತ್ಸೆ, ಕಣ್ಣಿನ ಚಿಕಿತ್ಸೆ, ರಕ್ತದ ವರ್ಗೀಕರಣ, ಮಹಿಳೆಯರಿಗೆ, ಥೈರಾಯಿಡ್ ಕಾಯಿಲೆಯ ಚಿಕಿತ್ಸೆಯನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ನಗರ ಬ್ಲಾಕ್ ಅಧ್ಯಕ್ಷ ವಿಶ್ವಾಸ್ ದಾಸ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮಾಜಿ ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್,ಪ್ರಭಾಕರ ಶ್ರೀಯಾನ್, ಟಿ.ಕೆ. ಸುಧೀರ್, ಆಶಿಶ್ ಪಿರೇರಾ, ಡಾ| ಬಿ.ಜಿ. ಸುವರ್ಣ, ಕಾಪರ್ೊರೇಟರ್ ನಾಗವೇಣಿ, ಶಶಿರಾಜ್ ಅಂಬಟ್, ಸತೀಶ್ ಪೂಜಾರಿ. ಚೇತನ್ ಕುಮಾರ್, ಸುರೇಶ್ ಶೆಟ್ಟಿ, ಡಾ| ಮಂಜಯ್ಯ ಶೆಟ್ಟಿ, ಡಾ| ರೇಜು ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಆರೋಗ್ಯ ಇಲಾಖೆ, ಎ.ಜೆ. ಆಸ್ಪತ್ರೆ, ಕೆ.ಎಂ.ಸಿ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಸಹಭಾಗಿತ್ವದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News