ಸುಳ್ಯ: ಕಾರು ಅಪಘಾತ
Update: 2016-06-26 16:29 IST
ಸುಳ್ಯ: ನಾರ್ಣಕಜೆ ಬಳಿ ಕಾರೊಂದು ಅಪಘಾತಕ್ಕೀಡಾದ ಘಟನೆ ಶನಿವಾರ ರಾತ್ರಿ ನಡೆದಿದೆ.
ಗುತ್ತಿಗಾರು ಕಡೆಯಿಂದ ಸುಳ್ಯ ಕಡೆಗೆ ಹೋಗುತ್ತಿದ್ದ ಚವರ್‌ಲೆಟ್ ಟವೇರಾ ಕಾರೊಂದು ಇನ್ನೊಂದು ವಾಹನವನ್ನು ಓವರ್‌ಟೇಕ್ ಮಾಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಜಾರಿತು. ನಂತರ ಗುತ್ತಿಗಾರಿನ ಜೀಪು ಚಾಲಕ ಮಾಲಕರ ನೆರವಿನಿಂದ ವಾಹನವನ್ನು ಮೇಲಕ್ಕೆತ್ತಲಾಯಿತು.