×
Ad

ಸುಳ್ಯ: ಬೆಳ್ಳಾರೆಯಲ್ಲಿ ಅಂತರ್ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟ

Update: 2016-06-26 16:32 IST

ಸುಳ್ಯ,ಜೂ.26: ಬೆಳ್ಳಾರೆ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್‌ನಲ್ಲಿ ಸಿ.ಬಿ.ಎಸ್.ಇ ಹಾಗೂ ಐ.ಸಿ.ಎಸ್.ಇ ವಿದ್ಯಾರ್ಥಿಗಳ ಅಂತರ್ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟ ಜರುಗಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಬೆಳ್ತಂಗಡಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕರು ಡಾ. ಸುಬ್ರಹ್ಮಣ್ಯಭಟ್, ಮಾತನಾಡಿ, ಚದುರಂಗಕ್ಕೆ ಗುಪ್ತರ ಕಾಲದ ಇತಿಹಾಸವಿದೆ. ಅದು ಚದುರಂಗ ಸೇನೆಯ ಮಾದರಿಯನ್ನು ಇಟ್ಟುಕೊಂಡು ಬೌದ್ಧಿಕ ಬೆಳವಣಿಗೆಗೆ ಮೋಜಿಸಿದ ಆಟವಾಗಿದೆ ಬದುಕಿನ ಹೊಂದಾಣಿಕೆಗಳಾದ ಸಹನೆ, ವಿಶ್ಲೇಷಣೆ ಏಕಾಗ್ರತೆ ಸೌಹಾರ್ದ, ಸಮನ್ವಯತೆ , ಶಾಂತತೆ , ಗೆಲುವಿನ-ಸೋಲಿನ ವಿಮರ್ಶೆ ಇತ್ಯಾದಿಗಳನ್ನು ಕಲಿಸುವ ಆಟದ ಕಲೆಯಾಗಿದೆ.

ವಿದ್ಯಾರ್ಥಿಗಳು ಇದರಲ್ಲಿ ತೊಡಗಿಸಿಕೊಂದರೆ ಬದುಕಿನಲ್ಲಿ ದೃಢತೆಯನ್ನು ಸಾಧಿಸಬಹುದು ಎಂದರು. ಡೆರಿಕ್ ಚೆಸ್ ಸ್ಕೂಲಿನ ಚೀಪ್ ಆರ್ಭಿಟರ್ ಪ್ರಸನ್ನ ಆಟಗಾರರಿಗೆ ನಿರ್ದೇಶನಗಳನ್ನು ನೀಡಿದರು. ವೇದಿಕೆಯಲ್ಲಿ ಶಾಲಾ ಪ್ರಾಂಶುಪಾಲರಾದ ದೇಚಮ್ಮ , ದೈಹಿಕ ಶಿಕ್ಷಣ ಶಿಕ್ಷಕರಾದ ಕುಸುಮಾಧರ್ ಉಪಸ್ಥಿತರಿದ್ದರು. ಪ0ದ್ಯಾಟದ ಸಮಾರೊಪ ಸಮಾರ0ಭಕ್ಕೆ ರಾಜ್ಯ ಮಟ್ಟದ ಚೆಸ್ಸ್ ಆಟಗಾರರಾದ ಸುಧರ್ಶನ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು . ಸುಮಾರು 30 ಕೇ0ದ್ರೀಯ ಶಾಲೆಗಳ 300 ವಿಧ್ಯಾರ್ಥಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News