ಮಂಗಳೂರು: ಜೋಕಟ್ಟೆಯಲ್ಲಿ ರಸ್ತೆ ಕುಸಿತ
ಮಂಗಳೂರು, ಜೂ.26: ನಗರದ ಜೋಕಟ್ಟೆಯ ಮಾಡಿಲ ಎಂಬಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆಯೊಂದು ಸುಮಾರು 15 ಅಡಿಗಳಷ್ಟು ಕುಸಿದ ಪರಿಣಾಮ ಸಂಚಾರಕ್ಕೆ ಅಪಾಯ ಎದುರಾಗಿದೆ.
ಕಳೆದೆರೆಡು ದಿನಗಳಿಂದ ಕುಸಿಯುತ್ತಿರುವ ಈ ರಸ್ತೆಯಿಂದ ಜನರು ಇಲ್ಲಿ ಆತಂಕದಿಂದ ಓಡಾಡುವಂತಾಗಿದೆ. ಬೈಕಂಪಾಡಿ ಮತ್ತು ಕೂಳೂರುನಿಂದ ಜೋಕಟ್ಟೆಯನ್ನು ಸಂಪರ್ಕಿಸುವ ರಸ್ತೆ ಇದಾಗಿದೆ.ಈ ರಸ್ತೆಯ ಅಡಿಯಲ್ಲಿ ಐಎಸ್‌ಪಿಆರ್‌ಎಲ್ ನ ಪೈಪ್‌ಲೈನ್ ಹಾದುಹೋಗಿದ್ದು ಇದೇ ಜಾಗದಲ್ಲಿ ರಸ್ತೆ ಕುಸಿತ ಕಂಡಿದೆ. ಮಳೆ ಜಾಸ್ತಿ ಬಂದರೆ ರಸ್ತೆ ಸಂಪೂರ್ಣ ಕುಸಿದು ಸಂಚಾರ ವ್ಯತ್ಯಾಯವಾಗುವ ಸಾಧ್ಯತೆಯಿದೆ.
ರಸ್ತೆ ಕುಸಿತದ ಹಿನ್ನೆಲೆಯಲ್ಲಿ ಇಂದು ಸ್ಥಳಕ್ಕೆ ಪಣಂಬೂರು ಪೊಲೀಸರು, ಸೆಜ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವುದರಿಂದ ಕೂಡಲೆ ಇದನ್ನು ಸರಿಪಡಿಸಬೇಕೆಂದು ತಾಲೂಕು ಪಂಚಾಯತ್ ಸದಸ್ಯ ಬಶೀರ್ ಆಹ್ಮದ್, ಜೋಕಟ್ಟೆ ಗ್ರಾಮಪಂಚಾಯತ್ ಉಪಾಧ್ಯಕ್ಷ ಸಂಶುದ್ದೀನ್ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.