×
Ad

ಉಳ್ಳಾಲ: ಬಡ ಕುಟುಂಬದ ಮನೆ ದುರಸ್ತಿಗೆ ಚೆಕ್ ವಿತರಣೆ

Update: 2016-06-26 21:20 IST

ಉಳ್ಳಾಲ,ಜೂ.26: ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ಇದರ ಆಶ್ರಯದಲ್ಲಿ ಬಡ ಕುಟುಂಬದ ಮನೆ ದುರಸ್ತಿಗೆ ಚೆಕ್ ವಿತರಣಾ ಕಾರ್ಯಕ್ರಮವು ಇತ್ತೀಚೆಗೆ ಅಂಬಿಕಾರೋಡ್‌ನಲ್ಲಿರುವ ಮಂಗಳೂರು ಸ್ವಾಮಿಲ್ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು.

 ಕಾರ್ಯಕ್ರಮವನ್ನುಉದ್ಘಾಟಿಸಿದ ತೊಕ್ಕೊಟ್ಟು ಎಸ್ಸೆಸ್ಸೆಫ್ ಸೆಕ್ಟರ್‌ನ ಅಧ್ಯಕ್ಷ ಇಲ್ಯಾಸ್ ಸಖಾಫಿ ಮಾತನಾಡಿ, ಪ್ರವಾದಿಯವರು ದಾನ ನೀಡುವುದಕ್ಕೆ ಹೆಚ್ಚು ಕೊಟ್ಟಿದ್ದರು. ಪವಿತ್ರ ರಂಝಾನ್ ತಿಂಗಳಲಲ್ಲಿ ದಾನ ಮಾಡುವವರಿಗೆ ಪರಲೋಕದಲ್ಲಿ ರಕ್ಷಣೆ ಇದೆ ಎಂದಿದ್ದರು. ಆದ್ದರಿಂದ ನಾವು ಬಡ ಕುಟುಂಬಗಳನ್ನು ಗುರುತಿಸಿ ಅವರ ಸಮಸ್ಯೆಗಳಿಗೆ ನೆರವಾಗಬೇಕು. ಈ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಕರೆ ನೀಡಿದರು.

ಕುಂಪಲ ನೂರಾರಾನಿ ಯತೀಂಖಾನದ ಪ್ರಧಾನ ಆರ್ಯದರ್ಶಿ ಇಕ್ಬಾಲ್ ಚೆಕ್ ವಿತರಿಸಿದರು. ಎಸ್ಸೆಸ್ಸೆಫ್ ರಿಲೀಫ್ ಸರ್ವಿಸ್‌ನ ಪ್ರಚಾರ ಸಮಿತಿಯ ಕನ್ವಿನರ್ ಉಮರಬ್ಬ ಕೈರಂಗಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎಸ್ಸೆಸೆಫ್ ರಿಲೀಫ್ ಸರ್ವಿಸ್‌ನ ಚಯರ್ ಮ್ಯಾನ್ ಅಲ್ತಾಫ್ ಕುಂಪಲ ಸ್ವಾಗತಿಸಿದರು.ಕೋಶಾಧಿಕಾರಿ ಶಮೀರ್ ಸೇವಂತಿಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News