×
Ad

ಪುತ್ತೂರು: ಸ್ಕೂಟರ್ ಗೆ ಬೆಂಕಿ

Update: 2016-06-26 22:12 IST

ಪುತ್ತೂರು,ಜೂ.26: ಚಾಲಕನ ನಿಯಂತ್ರಣ ತಪ್ಪಿದ ಎಂ80 ಸ್ಕೂಟರೊಂದು ಸ್ಕಿಡ್ ಆಗಿ ರಸ್ತೆಯಲ್ಲಿ ಉರುಳಿ ಬಿದ್ದು ತಕ್ಷಣ ಬೆಂಕಿಗಾಹುತಿಯಾದ ಘಟನೆ ಭಾನುವಾರ ಪುತ್ತೂರು ತಾಲೂಕಿನ ಪಾಲ್ತಾಡು ಎಂಬಲ್ಲಿ ನಡೆದಿದೆ.

ಪಾಲ್ತಾಡು ತಾರಿಪಡ್ಪು ನಿವಾಸಿ ಗೋಪಾಲಕೃಷ್ಣ ಮಣಿಯಾಣಿ ಎಂಬವರು ತನ್ನ ಸ್ಕೂಟರ್‌ನಲ್ಲಿ ಕಾಪುತಕಾಡು ಎಂಬಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಗೋಪಾಲಕೃಷ್ಣ ಮಣಿಯಾಣಿಯವರು ಚಲಾಯಿಸುತ್ತಿದ್ದ ಎಂ.80 ಮಳೆಯ ಕಾರಣದಿಂದ ಸ್ಕಿಡ್ ಆಗಿ ರಸ್ತೆಯಲಿ ಉರುಳಿನ ಬಿದ್ದಿತ್ತು. ಈ ಸಂದರ್ಭದಲ್ಲಿ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡು ವಾಹನ ಬಾಗಶಃ ಸುಟ್ಟುಹೋಗಿದೆ.

ಇದೇ ಸಂದರ್ಭದಲ್ಲಿ ಇಲ್ಲಿನ ಶ್ರೀವಿಷ್ಣುಮಿತ್ರ ವೃಂದದವರು ಮನೆಮನೆ ಸಸಿ ನೆಡುವ ಕಾರ್ಯಕ್ರಮ ನಡೆಸುತ್ತಿದ್ದು ವಾಹನಬಿದ್ದ ಕೂಡಲೇ ಅವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News